ಕ್ರೀಡೆ

ಪರ್ತ್ ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲುಕಂಡ ಭಾರತ; ಸರಣಿ 1-1ರಲ್ಲಿ ಸಮಬಲ

Pinterest LinkedIn Tumblr

ಪರ್ತ್: ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಪರ್ತ್ ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ 146 ರನ್ ಗಳ ಹೀನಾಯ ಸೋಲುಕಂಡಿದೆ.

ಆಸ್ಟ್ರೇಲಿಯಾ ನೀಡಿದ್ದ 287 ರನ್ ಗಳ ಗುರಿ ಬೆನ್ನಹತ್ತಿದ ಭಾರತ ತಂಡ ಕೇವಲ 140 ರನ್ ಗಳಿಗೆ ಆಲೌಟ್ ಆಗುವ ಮೂಲಕ 146 ರನ್ ಗಳ ಅಂತರದಲ್ಲಿ ಕಾಂಗರೂಗಳಿಗೆ ಶರಣಾಗಿದೆ. ಪ್ರಮುಖವಾಗಿ ಸುಲಭವಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಬ್ಯಾಟ್ಸಮನ್ ಗಳ ವೈಫಲ್ಯದಿಂದಾಗಿ ಭಾರತ ಸೋಲುವಂತಾಗಿದ್ದು ವಿಪರ್ಯಾಸ. 287 ರನ್ ಗಳ ಗುರಿಯನ್ನು ಬೆನ್ನ ಹತ್ತಿದ ಟೀಂ ಇಂಡಿಯಾ ಆಟಗಾರರ ಪೈಕಿ ರಹಾನೆ (30 ರನ್) ಮತ್ತು ರಿಷಬ್ ಪಂತ್ (30 ರನ್) ಅವರನ್ನು ಹೊರತು ಪಡಿಸಿದರೆ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಉಳಿದ ಇನ್ಯಾವ ಆಟಗಾರನೂ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತು ಆಡಲಿಲ್ಲ. ಪರಿಣಾಮ ಭಾರತ 2ನೇ ಪಂದ್ಯದಲ್ಲಿ ಹೀನಾಯ ಸೋಲುಕಂಡಿದೆ.

ಪ್ರಮುಖವಾಗಿ 10 ಬ್ಯಾಟ್ಸಮನ್ ಗಳ ಪೈಕಿ 3 ಮಂದಿ ಬ್ಯಾಟ್ಸಮನ್ ಗಳು ಶೂನ್ಯಕ್ಕೆ ಔಟಾದರೆ, ಅಗ್ರಕ್ರಮಾಂಕವೂ ಸೇರಿದಂತೆ ಇಬ್ಬರು ಬ್ಯಾಟ್ಸಮನ್ ಗಳು ಎರಡಂಕಿ ಮೊತ್ತ ಕೂಡ ದಾಟಲಿಲ್ಲ. ನಾಯಕ ಕೊಹ್ಲಿ 17 ರನ್, ಹನುಮ ವಿಹಾರಿ 28 ರನ್ ಗಳನ್ನು ಮಾತ್ರ ಗಳಿಸಲು ಶಕ್ತರಾದರು. ಅಗ್ರ ಕ್ರಮಾಂಕದ ಸಂಪೂರ್ಣ ವೈಫಲ್ಯ ಮತ್ತು ಕೆಳ ಕ್ರಮಾಂಕದ ಹೋರಾಟ ರಹಿತದ ಆಟವೇ ಭಾರತ ತಂಡದ ಸೋಲಿಗೆ ಕಾರಣವಾಯಿತು.

ಇನ್ನಿ ಆಸಿಸ್ ಪರ ಮಿಚೆಲ್ ಸ್ಟಾರ್ಕ್, ನಥನ್ ಲಿಯಾನ್ ತಲಾ 3 ವಿಕೆಟ್ ಪಡೆದರೆ, ಹೇಜಲ್ ವುಡ್ ಮತ್ತು ಪ್ಯಾಟ್ ಕಮಿನ್ಸ್ ತಲಾ 2 ವಿಕೆಟ್ ಪಡೆದರು.

Comments are closed.