ಕ್ರೀಡೆ

ಚೀನಾದಲ್ಲಿ ನಡೆಯಿತ್ತಿರುವ ಬಿಡಬ್ಲ್ಯುಎಫ್ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡ ಸಿಂಧೂ

Pinterest LinkedIn Tumblr

ಗುವಾಂಗ್ ಜೌ: ಚೀನಾದಲ್ಲಿ ನಡೆಯಿತ್ತಿರುವ ಬಿಡಬ್ಲ್ಯುಎಫ್ವರ್ಲ್ಡ್ ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ಆಟಗಾರ್ತಿ ಪಿವಿ ಸಿಂಧೂ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಬಿಡಬ್ಲ್ಯುಎಫ್ ವಿಶ್ವ ಟೂರ್‌ ಫೈನಲ್ಸ್‌ 2018 ಚಾಂಪಿಯನ್‌ಶಿಪ್ ಪ್ರಶಸ್ತಿ ಜಯಿಸಿದ ಪ್ರಥಮ ಭಾರತೀಯ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಜಪಾನ್‌ನ ನೊಜೊಮಿ ಒಕುಹರಾ ವಿರುದ್ಧ 21-19, 21-17 ಸೆಟ್ ಗಳ ಅಂತರದಲ್ಲಿ ಸಿಂಧೂ ಜಯಗಳಿಸಿದ್ದಾರೆ.

ಹೈದರಾಬಾದ್ ಮೂಲದ ಸಿಂಧೂ ಮೂರನೇ ಬಾರಿ ಈ ಟೂರ್ನಮೆಂಟ್ ನಲ್ಲಿ ಭಾಗವಹಿಸಿದ್ದು ಚೊಚ್ಚಲ ಬಾರಿಗೆ ಪ್ರಶಸ್ತಿ ಗಳಿಸಿದ್ದಾರೆ.

ಈ ಮುನ್ನ ಶನಿವಾರ ನಡೆದಿದ್ದ ಪಂದ್ಯದಲ್ಲಿ ಸಿಂಧೂ 2013ರ ಸಾಲಿನ ಚಾಂಪಿಯನ್ ಇಂಡೋನೇಷಿಯಾದ ಆಟಗಾರ್ತಿ ರಾಚ್ಟಾನೋಕ್ ಇಂಟನಾನ್ ಅವರನ್ನು ಮಣಿಸಿ ಫೈನಲ್ ಗೆ ಪ್ರವೇಶಿಸಿದ್ದರು.

2016ರ ರಿಯೊ ಒಲಿಂಪಿಕ್ಸ್‌, ಸೇರಿ ಅನೇಕ ಟೂರ್ನಿಗಳಲ್ಲಿ ಫೈನಲ್ ತಲುಪಿದ್ದರೂ ಕಡೆ ಕ್ಷಣದಲ್ಲಿ ಸೋಲು ಕಾಣುತ್ತಿದ್ದ ಸಿಂಧೂ ಈ ಬಾರಿ ವಿಜೇತರಾಗಿದ್ದು ಕಡೆಗೂ ಪ್ರಶಸ್ತಿಯ ಬರ ನೀಗಿಸಿಕೊಂಡಿದ್ದಾರೆ.

Comments are closed.