ಕ್ರೀಡೆ

ವಿರಾಟ್ ಕೊಹ್ಲಿ ಹುಟ್ಟುಹಬ್ಬಕ್ಕೆ ಪತ್ನಿ ಅನುಷ್ಕಾ ಮಾಡಿದ ಟ್ವೀಟ್ ಏನು ಗೊತ್ತೇ..?

Pinterest LinkedIn Tumblr

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಸೋಮವಾರ 30ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಸಂತೋಷದ ಗಳಿಗೆಯನ್ನು ಅವರು ತಮ್ಮ ಪತ್ನಿ ಅನುಷ್ಕಾ ಶರ್ಮ ಜೊತೆ ಹರಿದ್ವಾರ ಮತ್ತು ಹೃಷಿಕೇಶದಲ್ಲಿ ಕಳೆಯುತ್ತಿದ್ದಾರೆ.

ಕಳೆದ ಶನಿವಾರ ಹರಿದ್ವಾರಕ್ಕೆ ಆಗಮಿಸಿದ ಈ ಜೋಡಿ ಹಿಮಾಲಯದ ಆನಂದ ಎಂಬ ಸ್ಪಾ ರೆಸಾರ್ಟ್ ನಲ್ಲಿ ನಾಡಿದ್ದು 7ನೇ ತಾರೀಕಿನವರೆಗೆ ಜೋಡಿ ಇಲ್ಲಿ ಉಳಿಯಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಪತಿಯ ಹುಟ್ಟುಹಬ್ಬಕ್ಕೆ ಮುದ್ದಾದ ಟ್ವೀಟ್ ಮಾಡಿರುವ ಅನುಷ್ಕಾ, ಅವನ ಹುಟ್ಟಿಗೆ ದೇವರಿಗೆ ಧನ್ಯವಾದಗಳು ಎಂದು ಬರೆದು ಹೃದಯ ಮತ್ತು ನಗುವಿನ ಎಮೊಜಿ ಹಾಕಿದ್ದಾರೆ.

ಹೃಷಿಕೇಶದಲ್ಲಿ ಸೆಲೆಬ್ರಿಟಿ ಜೋಡಿಗಳು ತಮಗೆ ಇಷ್ಟಬಂದಂತೆ ಕಳೆಯಲಿದ್ದು ಅನುಷ್ಕಾರ ಕುಟುಂಬದ ಧಾರ್ಮಿಕ ಗುರುಗಳಾದ ಮಹಾರಾಜ ಅನಂತ್ ಬಾಬಾ ಅವರ ಅನಂತ್ ಧಾಮ ಆತ್ಮಬೋಧ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ.

Comments are closed.