ಮುಂಬೈ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕಾರ್ಯಕ್ರಮವೊಂದರಲ್ಲಿ ಭಾರತೀಯ ಟೆನಿಸ್ ಆಟಗಾರ್ತಿಗಿಂತ ಎತ್ತರವಾಗಿ ಕಾಣಲು ಮಾಡಿದ ಸಾಹಸ ಇದೀಗ ವೈರಲ್ ಆಗಿದೆ.
ಕಳೆದ ವಾರ ನಡೆದ ಕಾರ್ಯಕ್ರಮವೊಂದರಲ್ಲಿ ವಿರಾಟ್ ಕೊಹ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮಕ್ಕೆ ಟೆನಿಸ್ ಆಟಗಾರ್ತಿ ಕರ್ಮನ್ ಕೌರ್ ತಂಡಿ ಸಹ ಬಂದಿದ್ದರು. ಕರ್ಮನ್ ಕೌರ್ 6 ಅಡಿ ಎತ್ತರ ಇದ್ದಿದ್ದರಿಂದ ತಾನು ಕುಳ್ಳಗೆ ಕಾಣಬಾರದು ಅಂತ ವಿರಾಟ್ ಕೊಹ್ಲಿ ಕಾಲಿನ ಕೆಳಗೆ ಪುಟ್ಟದಾದ ಮೆಜೊಂದನ್ನು ಹಾಕಿಕೊಂಡಿದ್ದು ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಲ್ಲದೆ ವಿರಾಟ್ ಕೊಹ್ಲಿಯ ಈ ನಡೆಗೆ ಟ್ವೀಟರಿಗರು ಮಂಗಳಾರತಿ ಮಾಡಿದ್ದಾರೆ. ತಾನು ಮಹಿಳೆಗಿಂತ ಚಿಕ್ಕದಾಗಿ ಕಾಣಬಾರದು ಅಂತ ಕೊಹ್ಲಿ ಮೇಜಿನ ಮೇಲೆ ನಿಂತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
Comments are closed.