ಕ್ರೀಡೆ

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಪಡೆದ ‘ಮೊದಲ ಕಿರಿಯ ‘ ಬೌಲರ್ ಕುಲದೀಪ್ ಯಾದವ್ !

Pinterest LinkedIn Tumblr


ರಾಜ್ ಕೋಟ್ : ಸೌರಾಷ್ಟ್ರ ಕ್ರಿಕೆಟ್ ಅಸೊಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕುಲದೀಪ್ ಯಾದವ್ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ. ಐದು ವಿಕೆಟ್ ಪಡೆದ ಭಾರತದ ಮೊದಲ ಕಿರಿಯ ಬೌಲರ್ ಎಂಬ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ.
2017ರಲ್ಲಿ ಶ್ರೀಲಂಕಾದ ಲಕ್ಷಣ್ ಸಂದಕಾನ್ ನಂತರ ಈ ಸಾಧನೆ ಮಾಡಿದ ಏಷ್ಯಾದ ಎರಡನೇ ಆಟಗಾರ ಎಂಬ ಸಾಧನೆಯನ್ನು 23 ವರ್ಷದ ಕುಲದೀಪ್ ಯಾದವ್ ಮಾಡಿದ್ದಾರೆ.
ಕುಲದೀಪ್ ಯಾದವ್ ಅವರ ಬೌಲಿಂಗ್ ಬೆಂಬಲದಿಂದ ವೆಸ್ಟ್ ಇಂಡೀಸ್ ತಂಡವನ್ನು ಎರಡನೇ ಇನ್ನಿಂಗ್ಸ್ ನಲ್ಲಿ 272 ರನ್ ಗಳಿಗೆ ಕಟ್ಟಿಹಾಕಿದ ಭಾರತ ಇನ್ನಿಂಗ್ಸ್ ಜಯ ಗಳಿಸಿತ್ತು.
ಈ ಕುರಿತಂತೆ ಪ್ರತಿಕ್ರಿಯಿಸಿದ ಕುಲದೀಪ್ ಯಾದವ್, ಟೆಸ್ಟ್ ಕ್ರಿಕೆಟ್ ನಲ್ಲಿ ಐದು ವಿಕೆಟ್ ಪಡೆದಿರುವುದು ನಿಜಕ್ಕೂ ಅಸಂಭಾವ್ಯ ಎನಿಸುತ್ತಿದೆ. ದೇಶಿಯ ಪಂದ್ಯದ ಸಂದರ್ಭದಲ್ಲಿ ಟೆಸ್ಟ್ ಮಾದರಿಯ ಪಂದ್ಯದಲ್ಲಿ ಆಡಬೇಕೆಂಬುದು ಪ್ರತಿಯೊಬ್ಬರ ಕನಸು ಆಗಿರುತ್ತದೆ. ವಿದೇಶಿ ನೆಲದಲ್ಲಿ ಹೊಂದಿಕೊಳ್ಳಲು ಟೀಂ ಇಂಡಿಯಾಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂಗ್ಲೆಡ್ ವಿರುದ್ಧ ಸೋಲಬೇಕಾಯಿತು ಎಂದರು.
ಕೆರೆಬಿಯನ್ನರ ವಿರುದ್ಧ ತಮ್ಮ ಬೌಲಿಂಗ್ ಕಾರ್ಯತಂತ್ರ ಕುರಿತಂತೆ ಮಾತನಾಡಿದ ಕುಲದೀಪ್ ಯಾದವ್, ಮೊದಲ ಇನ್ನಿಂಗ್ಸ್ ನಲ್ಲಿ ನಾನು ದಾಳಿ ಮಾಡಲಿಲ್ಲ. ಚೆಂಡನ್ನು ಮೇಲಕ್ಕೆ ಎಸೆಯಲು ಪ್ರಯತ್ನಿಸಿದ್ದರಿಂದ ಅನಗತ್ಯವಾಗಿ ರನ್ ನೀಡಬೇಕಾಯಿತು. ಆದರೆ, ಎರಡನೇ ಇನ್ನಿಂಗ್ಸ್ ನಲ್ಲಿ ಇದನ್ನು ನಿಯಂತ್ರಣ ಮಾಡುವ ಗುರಿಯೊಂದಿಗೆ ಕನಿಷ್ಟ ಮಟದಲ್ಲಿ ಎಸೆಯುತ್ತಿದೆ. ಇದರಿಂದಾಗಿ ಅನುಕೂಲವಾಯಿತು ಎಂದರು.
ಇಂಗ್ಲೆಂಡ್ ನಿಂದ ವಾಪಾಸ್ಸಾದ ನಂತರ ತರಬೇತುದಾರರ ಬಳಿ ಹೋಗಿ ಚೆಂಡನ್ನು ಕ್ಷಿಪ್ರಗತಿಯಲ್ಲಿ ಎಸೆಯುವ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾಗಿ ಕುಲದೀಪ್ ಯಾದವ್ ಹೇಳಿದರು.

Comments are closed.