ಕ್ರೀಡೆ

ಐಸಿಸಿ ಏಕದಿನ ರಾಂಕಿಂಗ್ ನಲ್ಲಿ ಕೊಹ್ಲಿಗೆ ಅಗ್ರಸ್ಥಾನ, ಎರಡನೇ ಸ್ಥಾನಕ್ಕೇರಿದ ರೋಹಿತ್ ಶರ್ಮಾ

Pinterest LinkedIn Tumblr

ದುಬೈ: ಟೀಂ ಇಂಡಿಯಾ 2018ರ ಏಷ್ಯಾ ಕಪ್ ಚಾಂಪಿಯನ್ ಆಗಿ ಹೊರ ಹೊಮ್ಮಿದ ಬೆನ್ನಲ್ಲೇ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ರೋಹಿತ್ ಶರ್ಮಾ ಇದೀಗ ಐಸಿಸಿ ರ್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.

ಟೀಂ ಇಂಡಿಯಾದ ಖಾಯಂ ನಾಯಕ ವಿರಾಟ್ ಕೊಹ್ಲಿ 884 ಅಂಕಗಳೊಂದಿಗೆ ಏಕದಿನ ಬ್ಯಾಟಂಗ್ ನಲ್ಲಿ ಅಗ್ರಸ್ಥಾನದಲ್ಲಿದ್ದು ರೋಹಿತ್ ಶರ್ಮಾ 842 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೇರಿದ್ದಾರೆ. ಇನ್ನು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶಿಖರ್ ಧವನ್ 802 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.

ಇನ್ನು ಏಕದಿನ ಬೌಲಿಂಗ್ ನಲ್ಲಿ ಜಸ್ ಪ್ರೀತ್ ಬುಮ್ರಾ 797 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಭದ್ರವಾಗಿದ್ದಾರೆ. ಟೀಂ ಇಂಡಿಯಾದ ಯುವ ಸ್ಪಿನ್ನರ್ ಚೈನಾಮನ್ ಖ್ಯಾತಿಯ ಕುಲದೀಪ್ ಯಾದವ್ 700 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

Comments are closed.