ಕ್ರೀಡೆ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕೈಯ್ಯಾರೆ ಕಳೆದುಕೊಂಡರು: ಕೊಹ್ಲಿ ಪಡೆ ವಿರುದ್ಧ ದ್ರಾವಿಡ್ ಬೇಸರ

Pinterest LinkedIn Tumblr

ಮುಂಬೈ: ಟೆಸ್ಟ್ ನಲ್ಲಿ ಬಲಿಷ್ಠ ತಂಡವಾಗಿದ್ದ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಸುಲಭವಾಗಿ ಗೆಲ್ಲಬಹುದಿತ್ತು ಆದರೆ ತಮ್ಮ ಕೈಯ್ಯಾರೆ ಸರಣಿಯನ್ನು ಕಳೆದುಕೊಂಡರು ಎಂದು ವಿರಾಟ್ ಕೊಹ್ಲಿ ಪಡೆ ವಿರುದ್ಧ ರಾಹುಲ್ ದ್ರಾವಿಡ್ ಬೇಸರ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾ ಬೌಲಿಂಗ್ ನಲ್ಲಿ ಹಿಂದೆಗಿಂತಲೂ ಬಲಿಷ್ಠವಾಗಿತ್ತು. ಆದರೆ ಬ್ಯಾಟಿಂಗ್ ವೈಫಲ್ಯದಿಂದ ಟೀಂ ಇಂಡಿಯಾದಾಗಬೇಕಿದ್ದ ಸರಣಿ ಇಂಗ್ಲೆಂಡ್ ಪಾಲಾಯಿತು ಎಂದು ಭಾರತ ಎ ತಂಡದ ಕೋಚ್ ಕನ್ನಡಿಗ ರಾಹುಲ್ ದ್ರಾವಿಡ್ ಅಭಿಪ್ರಾಯ ಪಟ್ಟಿದ್ದಾರೆ.

ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾದ ಇಶಾಂತ್ ಶರ್ಮಾ 18, ಮೊಹಮ್ಮದ್ ಶಮಿ 16 ಹಾಗೂ ಜಸ್ಪ್ರೀತ್ ಬುಮ್ರಾ 14 ವಿಕೆಟ್ ಪಡೆದಿದ್ದಾರೆ. ಇನ್ನು ಅಶ್ವಿನ್ ಹಾಗೂ ಹಾರ್ದಿಕ್ ಪಾಂಡ್ಯ ಕೂಡ 10ಕ್ಕೂ ಹೆಚ್ಚು ವಿಕೆಟ್ ಪಡೆದು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

ಆದರೆ ಬ್ಯಾಟಿಂಗ್ ನಲ್ಲಿ ವಿರಾಟ್ ಕೊಹ್ಲಿಯನ್ನು ಬಿಟ್ಟರೆ ಮತ್ಯಾವ ಬ್ಯಾಟ್ಸ್ ಮನ್ ಕೂಡ ಇಂಗ್ಲೆಂಡ್ ಬೌಲರ್ ಗಳ ವಿರುದ್ಧ ಬ್ಯಾಟ್ ಬೀಸಲು ತಿಣುಕಾಡಿದರು. ಬ್ಯಾಟ್ಸ್ ಮನ್ ಗಳು ಬೌಲರ್ ಗಳ ಬೆನ್ನಿಗೆ ನಿಂತಿದ್ದರೆ 4-1ರಲ್ಲಿ ಟೆಸ್ಟ್ ಗೆಲ್ಲಬಹುದಿತ್ತು ಎಂದು ದ್ರಾವಿಡ್ ಹೇಳಿದ್ದಾರೆ.

Comments are closed.