ಕ್ರೀಡೆ

ಧೋನಿಯನ್ನು ಹುಡುಕಿಕೊಂಡು ಬಂದ ಪಾಕ್ ಆಟಗಾರ ಶೋಯಿಬ್ ಮಲಿಕ್‌ ನೀಡಿದ ಗೌರವ ಹೇಗಿತ್ತು ನೋಡಿ…!

Pinterest LinkedIn Tumblr

ದುಬೈ: ಸಾಂಪ್ರದಾಯಿಕ ಎದುರಾಳಿಗಳಾದ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ಏಷ್ಯಾಕಪ್ ಹಿನ್ನೆಲೆಯಲ್ಲಿ ದುಬೈಗೆ ತೆರಳಿದ್ದು, ಅಭ್ಯಾಸದ ವೇಳೆ ಪಾಕಿಸ್ತಾನ ತಂಡದ ಮಾಜಿ ನಾಯಕ ಶೋಯಿಬ್ ಮಲಿಕ್ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದರು.

ಎಂಎಸ್ ಧೋನಿಯನ್ನು ಭೇಟಿಯಾದ ವೇಳೆ ಶೋಯಿಬ್ ಮಲಿಕ್ ತಮ್ಮ ಕ್ಯಾಪ್ ಮೇಲಕ್ಕೆ ಸರಿಸಿ ಗೌರವ ನೀಡಿದ್ದು ಇದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.

ಇವರಿಬ್ಬರ ಭೇಟಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮಲಿಕ್ ತೋರಿದ ಗೌರವದ ಬಗ್ಗೆ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

ದಿಗ್ಗಜ ಆಟಗಾರನನ್ನು ಯಾವ ರೀತಿ ಗೌರವಿಸಬೇಕು ಎಂದು ಮಲಿಕ್ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಅಭಿಮಾನಿಗಳು ಬಣ್ಣಿಸಿದ್ದಾರೆ.

Comments are closed.