
ನ್ಯೂಯಾರ್ಕ್: ಅಮೆರಿಕಾದಲ್ಲಿ ಬಿಸಿಲಿನ ತಾಪ ಜೋರಾಗಿದ್ದು ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಟಗಾರರು ಬಿಲಿಸಿನಿಂದ ಕಂಗೆಟ್ಟಿದ್ದಾರೆ.
ಈ ಮಧ್ಯೆ ಫ್ರಾನ್ಸ್ ನ ಅಲೈಜ್ ಕಾರ್ನೆಟ್ ಅಂಗಳದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಅಲೈಜ್ ಅಂಗಳಕ್ಕೆ ಬರುವಾಗ ಟೀ ಶರ್ಟ್ ಉಲ್ಟಾ ಹಾಕಿಕೊಂಡು ಬಂದಿದ್ದರು. ಇದು ಗೊತ್ತಾಗಿ ಆಕೆ ಮೈದಾನದಲ್ಲೇ ಟೀ ಶರ್ಟ್ ಅನ್ನು ಬದಲಿಸಿಕೊಂಡಿದ್ದಾರೆ.
ಇದು ಭಾರೀ ಟೀಕೆಗೆ ಗುರಿಯಾಗಿದೆ. ಇನ್ನು ಬಿಸಿಲಿನ ತಾಪಕ್ಕೆ ಬಸವಳಿದಿರುವ ಸರ್ಬಿಯಾದ ಆಟಗಾರ ನೊವಾಕ್ ಜಾಕೋವಿಚ್ ಅವರು ತಮ್ಮ ಟೀ ಶರ್ಟ್ ಬಿಚ್ಚಿ ಬಿಸಾಡಿ ವಿಶ್ರಾಂತಿ ಪಡೆದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Comments are closed.