ಕ್ರೀಡೆ

ಬಲ-ಎಡಗೈನಿಂದ ಬೌಲ್​ ಮಾಡುವ ಈತ ಬ್ಯಾಟಿಂಗ್​ನಲ್ಲಿ ಬ್ಲಾಸ್ಟರ್ !

Pinterest LinkedIn Tumblr


ಚೆನ್ನೈ: ವಿನೂತನ ಪ್ರಯತ್ನಗಳಿಗೆ ವೇದಿಕೆಯಾದ ಕ್ರೀಡಾಲೋಕದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ವಿಶಿಷ್ಟ ಪ್ರತಿಭೆ ಮುಖ್ಯವಾಹಿನಿಗೆ ಬರುತ್ತಿರುತ್ತಾರೆ. ಇದೀಗ ಮೋಕಿತ್​ ಹರಿಹರನ್ ಸರದಿ.​ ಈತ ತನ್ನ ವಿಶೇಷ ಸಾಮರ್ಥ್ಯದಿಂದ ಕ್ರಿಕೆಟ್​ ಲೋಕದಲ್ಲಿ ಅಚ್ಚರಿಯನ್ನುಂಟು ಮಾಡಿದ್ದಾರೆ.

18 ವರ್ಷದ ಹರಿಹರನ್​ ಎರಡೂ ಕೈನಿಂದಲೂ ಸರಾಗವಾಗಿ ಬೌಲಿಂಗ್​ ಮಾಡುವ ಚಾಕಚಕ್ಯತೆಯನ್ನು ಹೊಂದಿದ್ದಾರೆ. ಪ್ರಸ್ತುತ ನಡೆಯುತ್ತಿರುವ ತಮಿಳುನಾಡು ಪ್ರೀಮಿಯರ್​ ಲೀಗ್​ನಿಂದ ಈ ಪ್ರತಿಭೆ ಬೆಳಕಿಗೆ ಬಂದಿದೆ. ಸ್ಪಿನ್​ ಬೌಲರ್​ ಆಗಿರುವ ಹರಿಹರನ್​ ಬಲಗೈ ಬ್ಯಾಟ್ಸ್​ಮನ್​ಗಳಿಗೆ ಎಡಗೈನಿಂದಲೂ, ಎಡಗೈ ಬ್ಯಾಟ್ಸ್​ಮನ್​ಗಳಿಗೆ ಬಲಗೈನಿಂದಲೂ ಬೌಲ್​ ಮಾಡುತ್ತಾರೆ.

ವಿಶೇಷ ಸಾಮರ್ಥ್ಯವನ್ನು ಹೊಂದಿದ್ದರೂ ಹರಿಹರನ್​ ಇದುವರೆಗೂ ಒಂದು ವಿಕೆಟ್​ ಪಡೆದಿಲ್ಲ. ಆದರೂ ತನ್ನ ಬ್ಯಾಟಿಂಗ್​ ಸಾಮರ್ಥ್ಯದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಟಿಎನ್​ಪಿಎಬ್​ ಲೀಗ್​ನಲ್ಲಿ ಕಾಂಚಿ ವೀರನ್ಸ್​ ತಂಡದ ಪರ ಆಡಿದ ಹರಿಹರನ್​ ಕೇವಲ 50 ಎಸೆತದಲ್ಲೇ ಅಜೇಯ 77 ರನ್​ ಬಾರಿಸಿ ಭವಿಷ್ಯದ ಟೀಂ ಇಂಡಿಯಾದ ಆಟಗಾರ ಎಂಬ ಮಾತಿಗೆ ಜೀವ ತುಂಬಿದ್ದಾರೆ.

Comments are closed.