ಕ್ರೀಡೆ

ಬರೋಬ್ಬರಿ 16 ಲಕ್ಷ ರುಪಾಯಿ ಟಿಪ್ಸ್ ನೀಡುವ ಮೂಲಕ ಸುದ್ದಿಯಾಗಿದ ರೊನಾಲ್ಡೋ

Pinterest LinkedIn Tumblr

ಅಥೆನ್ಸ್: ನಾವೆಲ್ಲ ಹೆಚ್ಚೆಂದರೆ ಹೋಟೆಲ್, ರೆಸ್ಟೋರೆಂಟ್’ಗಳಲ್ಲಿ ಹೆಚ್ಚೆಂದರೆ ಸಾವಿರ ಇಲ್ಲವೇ ಎರಡು ಸಾವಿರ ಟಿಪ್ಸ್ ಕೊಡೋದನ್ನು ನೋಡಿದರೇ ಹುಬ್ಬೇರಿಸುತ್ತೇವೆ. ಆದರೆ ಪೋರ್ಚುಗಲ್’ನ ಕ್ರಿಸ್ಟಿಯಾನೋ ರೊನಾಲ್ಡೊ ಬರೋಬ್ಬರಿ 16 ಲಕ್ಷ ರುಪಾಯಿ ಟಿಪ್ಸ್ ನೀಡುವ ಮೂಲಕ ಸುದ್ದಿಯಾಗಿದ್ದಾರೆ.

ಫಿಫಾ ವಿಶ್ವಕಪ್ ಸೋಲಿನ ಬಳಿಕ ಮ್ಯಾಡ್ರಿಡ್ ತಂಡ ತೊರೆದ ರೋನಾಲ್ಡೋ
ಹೌದು, ಕ್ರಿಸ್ಟಿಯಾನೋ ರೋನಾಲ್ಡೋ ವಿಶ್ವಕಪ್ ಮುಗಿಸಿ, ಇಟಲಿಯ ಜುವೆಂಟಸ್ ಕ್ಲಬ್‌ಗೆ ಸೇರುವ ಮುನ್ನ ಕುಟುಂಬದೊಂದಿಗೆ ಗ್ರೀಸ್‌ಗೆ ಪ್ರವಾಸಕ್ಕಾಗಿ ತೆರಳಿದ್ದರು. ಈ ವೇಳೆ ಅವರು ತಂಗಿದ್ದ ರೆಸಾರ್ಟ್‌ನಲ್ಲಿ ಸಿಕ್ಕ ಸೇವೆ ಅತ್ಯುತ್ತಮವಾಗಿದ್ದ ಕಾರಣ, ಸಿಬ್ಬಂದಿಗೆ ಬರೋಬ್ಬರಿ ₹16 ಲಕ್ಷ ಟಿಪ್ಸ್ ನೀಡಿ ಗಮನ ಸೆಳೆದಿದ್ದಾರೆ.

ಇಟಲಿಯಲ್ಲೀಗ ಕ್ರಿಸ್ಟಿಯಾನೋ ರೊನಾಲ್ಡೋ ಮೇನಿಯಾ!
ರೊನಾಲ್ಡೋ ಇಷ್ಟೊಂದು ಮೊತ್ತದ ಟಿಪ್ಸ್ ನೀಡಿರುವುದು ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಪೋರ್ಚುಗಲ್ ಆಟಗಾರನ ಔದಾರ್ಯತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Comments are closed.