ಕ್ರೀಡೆ

ಮೊದಲ ಟೆಸ್ಟ್​ನಲ್ಲಿ ಒಂದೂ ರನ್​ ಗಳಿಸದೆ ವಿಕೆಟ್​ ನೀಡಿದ ಸಚಿನ್ ಪುತ್ರ!

Pinterest LinkedIn Tumblr


ನವದೆಹಲಿ: ಭಾರತದ ಕ್ರಿಕೆಟ್​ ದಂತಕಥೆ ಸಚಿನ್​ ತೆಂಡೂಲ್ಕರ್​ ಮಗ ಅರ್ಜುನ್​ ತೆಂಡೂಲ್ಕರ್​ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ 19 ವರ್ಷದೊಳಗಿನವರ ಟೆಸ್ಟ್​ ಪಂದ್ಯದಲ್ಲಿ ರನ್​ ಗಳಿಸಲು ವಿಫಲವಾಗಿದ್ದು ಶೂನ್ಯಕ್ಕೇ ಔಟ್​ ಆಗಿದ್ದಾರೆ.

ಕೊಲಂಬೋದ ನಾಂಡ್​ಸ್ಕ್ರಿಪ್ಟ್​ ಕ್ರಿಕೆಟ್​ ಕ್ಲಬ್​ನಲ್ಲಿ ನಡೆಯುತ್ತಿರುವ ತಮ್ಮ ಮೊದಲ ಟೆಸ್ಟ್​ ಪಂದ್ಯದಲ್ಲಿ ಬ್ಯಾಟಿಂಗ್​ಗೆ ಇಳಿದ ಅರ್ಜುನ್​ 11 ಬೌಲ್​ಗಳನ್ನು ಎದುರಿಸಿದ್ದು ಕೊನೆಗೂ ರನ್​ ಗಳಿಸಲಾಗಿದೆ ಶಶಿಕಾ ದಲ್ಶಿನ್​ಗೆ ವಿಕೆಟ್​ ಒಪ್ಪಿಸಿ ತೆರಳಿದ್ದಾರೆ.
ಸಚಿನ್​ ತೆಂಡೂಲ್ಕರ್​ ಸಹ 1989ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ತಮ್ಮ ಮೊದಲ ಏಕದಿನ ಪಂದ್ಯದಲ್ಲಿ ಝೀರೋಕ್ಕೆ ವಿಕೆಟ್​ ನೀಡಿದ್ದರು. ಈಗ ಅವರ ಮಗ ಕೂಡ ಟೆಸ್ಟ್​ ಪಂದ್ಯದಲ್ಲಿ ಶೂನ್ಯಕ್ಕೆ ಔಟ್​ ಆಗಿದ್ದಾರೆ.

ಅರ್ಜುನ್​ ಮಂಗಳವಾರ ಕಮಿಲ್​ ಮಿಶ್ರಾ ಅವರನ್ನು ಎಲ್​ಬಿಡಬ್ಲ್ಯೂ ಮಾಡುವ ಮೂಲಕ ತಮ್ಮ ಅಂತಾರಾಷ್ಟ್ರೀಯ ಪಂದ್ಯದ ಮೊದಲ ವಿಕೆಟ್​ ಪಡೆದಿದ್ದರು. ಆದರೆ, ಇವತ್ತು 11 ಬಾಲ್​ ಎದುರಿಸಿದರೂ ಒಂದೂ ರನ್​ ಗಳಿಸಲು ಸಾಧ್ಯವಾಗಿಲ್ಲ.

Comments are closed.