ಕ್ರೀಡೆ

ಫಿಫಾ ವಿಶ್ವಕಪ್ ವಿಜೇತರಿಗೆ ಪುಟೀನ್ ಎದುರೇ ನೀಡಲಾಗುತ್ತಿದ್ದ ಚಿನ್ನದ ಪದಕವನ್ನೇ ಎಗರಿಸಿದ ಮಹಿಳೆ! ವೀಡಿಯೊ ವೈರಲ್ …

Pinterest LinkedIn Tumblr

ಮಾಸ್ಕೋ(ರಷ್ಯಾ): ಫ್ರಾನ್ಸ್ 2018ರ ಫಿಫಾ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಫ್ರಾನ್ಸ್ ತಂಡದ ಆಟಗಾರರಿಗೆ ಚಿನ್ನದ ಪದಕವನ್ನು ನೀಡಿ ಸಮ್ಮಾನಿಸುತ್ತಿದ್ದ ವೇಳೆ ಒಂದು ಚಿನ್ನದ ಪದಕವನ್ನು ಮಹಿಳೆಯೊಬ್ಬರು ಎಗರಿಸಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟೀನ್ ಪಕ್ಕದಲ್ಲೇ ನಿಂತಿದ್ದ ಮಹಿಳೆಯೋರ್ವಳು ಆಟಗಾರರಿಗೆ ಚಿನ್ನದ ಪದಕವನ್ನು ಪ್ರಧಾನ ಮಾಡಲಾಗುತ್ತಿದ್ದ ವೇಳೆ ಒಂದು ಚಿನ್ನದ ಪದಕವನ್ನು ಎಗರಿಸಿ ತಾನು ಧರಿಸಿದ್ದ ಕೋಟ್ ನ ಜೇಬಿನೊಳಗೆ ಹಾಕಿಕೊಳ್ಳುತ್ತಿರುವುದನ್ನು ಗಮನಿಸಿದ ವ್ಯಕ್ತಿಯೋರ್ವ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿದ್ದಾನೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು ಟ್ವೀಟರಿಗರು ಹಾಸ್ಯಾತ್ಮಕ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ.

ಪುಟೀನ್ ಎದುರೇ ಚಿನ್ನದ ಪದಕವನ್ನು ಎಗರಿಸಿದ್ದ ಮಹಿಳೆಗೆ ಎಷ್ಟು ಧೈರ್ಯವಿರಬೇಕು ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.

ಇನ್ನು ಮತ್ತೊಬ್ಬರು ಒಂದು ಚಿನ್ನದ ಪದಕ ಹೆಚ್ಚಾಗಿತ್ತೇನೋ ಅದಕ್ಕೆ ಆ ಪದಕವನ್ನು ಮಹಿಳೆ ಜೋಪಾನ ಮಾಡುತ್ತಿದ್ದಾಳೆ ಎಂದು ಕೆಲವರು ಟ್ವೀಟ್ ಮಾಡುತ್ತಿದ್ದಾರೆ.

Comments are closed.