ಕ್ರೀಡೆ

ಫೀಫಾ ವಿಶ್ವಕಪ್ 2018:ರ ಟೂರ್ನಿಯಲ್ಲಿ ಕ್ರೊವೇಷಿಯಾ ಗೆದ್ದರೂ, ಸೋತರೂ ಇತಿಹಾಸ !

Pinterest LinkedIn Tumblr

ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2018 ಟೂರ್ನಿ ಅಂತಿಮ ಹಂತ ತಲುಪಿದ್ದು, ಫೈನಲ್ ನಲ್ಲಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಕ್ರೊವೇಷಿಯಾ ತಂಡ ಪೈನಲ್ ಗೇರಿದ್ದು, ಫ್ರಾನ್ಸ್ ತಂಡವನ್ನು ಎದುರಿಸುತ್ತಿದೆ.

ಈಗ್ಗೆ ಒಂದು ತಿಂಗಳ ಹಿಂದೆ ವಿಶ್ವಕಪ್ ಟೂರ್ನಿ ಆರಂಭಗೊಂಡಾಗ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳ ಪಟ್ಟಿಯಲ್ಲಿ ಕ್ರೊವೇಷಿಯಾ ಹೆಸರು ಕೇಳಿಯೇ ಇರಲಿಲ್ಲ. ಫೈನಲ್ ಬಿಡಿ.. ಕ್ರೊವೇಷಿಯಾ ತಂಡ ನಾಕೌಟ್ ಹಂತಕ್ಕೇರುತ್ತದೆ ಎಂಬ ವಿಚಾರದ ಬಗ್ಗೆಯೂ ಯಾರೂ ತಲೆ ಕಡೆಸಿಕೊಂಡಿರಲಿಲ್ಲ. ಎಲ್ಲರ ಬಾಯಲ್ಲೂ ಅರ್ಜೆಂಟೀನಾ, ಪೋರ್ಚುಗಲ್, ಬ್ರೆಜಿಲ್, ಜರ್ಮನಿ, ಸ್ಪೇನ್‌ ನಂತಹ ಹಳೆಯ ಹುಲಿಗಳ ಹೆಸರು ಹೇಳಿದ್ದವರೇ ಹೆಚ್ಚು. ಆದರೆ, ಎಲ್ಲರ ಲೆಕ್ಕಾಚಾರವನ್ನು ಬುಡಮೇಲು ಮಾಡಿರುವ ಲೂಕಾ ಮಾಡ್ರಿಚ್ ನಾಯಕತ್ವದ ಕ್ರೊವೇಷಿಯಾ ತಂಡವು ಫೈನಲ್‌ಗೆ ಲಗ್ಗೆ ಇಟ್ಟಿದೆ.

1998ರಲ್ಲೇ ಕ್ರೊವೇಷಿಯಾ ತಂಡ ತನ್ನ ಮೊದಲ ವಿಶ್ವಕಪ್ ಗೆದ್ದಿತ್ತಾದರೂ ಪೈನಲ್ ಹಂತದವರೆಗೂ ಬಂದಿರಲಿಲ್ಲ. ಹೀಗಾಗಿ ಕ್ರೊವೇಷಿಯಾ ತಂಡವನ್ನು ಎಲ್ಲರೂ ಕಪ್ಪು ಕುದುರೆ (ಡಾರ್ಕ್ ಹಾರ್ಸ್) ಎಂದು ಮೂದಲಿಸುತ್ತಿದ್ದರು. ಆದರೆ ಎಲ್ಲರ ಲೆಕ್ಕಾಚಾರಗಳನ್ನು ಈ ಬಾರಿ ಬುಡಮೇಲು ಮಾಡಿರುವ ಲೂಕಾ ಪಡೆ ತಾನು ‘ಕಪ್ಪುಕುದುರೆ’ ಅಲ್ಲ, ‘ವಿಜಯದ ಅಶ್ವ’ ಎಂದು ಸಾರಿ ಹೇಳುತ್ತಿದೆ.

ಕ್ರೊವೇಷ್ಯಾಗೆ ಮೊದಲ ಫೈನಲ್‌
1998ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಅಂಗಳಕ್ಕೆ ಕಾಲಿಟ್ಟಿದ್ದ ತಂಡವು ಮೂರನೇ ಸ್ಥಾನ ಪಡೆದಿತ್ತು. ಅದರ ನಂತರ ಅಂತಹ ಹೇಳಿಕೊಳ್ಳುವಂತಹ ಸಾಧನೆಯನ್ನು ಮಾಡಿರಲಿಲ್ಲ. ಆದರೆ ಈ ಬಾರಿ ರಷ್ಯಾದ ಅಂಗಳದಲ್ಲಿ ತನ್ನ ಹೆಜ್ಜೆಗುರುತು ಮೂಡಿಸಿದೆ. ಗುಂಪು ಮತ್ತು ನಾಕೌಟ್ ಹಂತಗಳಲ್ಲಿ ಅರ್ಜೆಂಟೀನಾ, ಡೆನ್ಮಾರ್ಕ್, ಆತಿಥೇಯ ರಷ್ಯಾ ತಂಡಗಳನ್ನು ಮಣಿಸಿತ್ತು. ಪಂದ್ಯದಿಂದ ಪಂದ್ಯಕ್ಕೆ ತನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ತಂಡವು ಈಗ ಪ್ರಶಸ್ತಿಗೆ ಒಂದು ಹೆಜ್ಜೆ ದೂರದಲ್ಲಿದೆ.

ಇಪ್ಪತ್ತು ವರ್ಷಗಳ ಹಿಂದೆ ಪ್ರಶಸ್ತಿ ಗೆದ್ದಿದ್ದ ಫ್ರಾನ್ಸ್‌ ತಂಡದಲ್ಲಿ ಈಗ ಪ್ರತಿಭಾವಂತ ಯುವಪಡೆ ಇದೆ. ಅದನ್ನು ಎದುರಿಸುವತ್ತ ಲೂಕಾ ಬಳಗವು ಚಿತ್ತ ನೆಟ್ಟಿದೆ. ಫುಟ್‌ಬಾಲ್ ಜಗತ್ತಿನ ಹೊಸ ಶಕ್ತಿಯಾಗಿ ಉದಯಿಸುವ ಕನಸು ಕಾಣುತ್ತಿದೆ.

Comments are closed.