ಕ್ರೀಡೆ

2ನೇ ಏಕದಿನ ಪಂದ್ಯ; ಟೀಂ ಇಂಡಿಯಾ ವಿರುದ್ಧ ಸೇಡುತೀರಿಸಿಕೊಂಡ ಇಂಗ್ಲೆಂಡ್: 86 ರನ್ ಗಳ ಜಯ

Pinterest LinkedIn Tumblr

ಲಾರ್ಡ್ಸ್(ಇಂಗ್ಲೆಂಡ್): ಟೀಂ ಇಂಡಿಯಾದ ಹಾಗೂ ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 86 ರನ್ ಗಳಿಂದ ಜಯ ಗಳಿಸಿದೆ.

ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಂಗ್ಲರು ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 322 ರನ್ ಪೇರಿಸಿದ್ದು ಟೀಂ ಇಂಡಿಯಾಗೆ ಗೆಲ್ಲಲು 323 ರನ್ ಗಳ ಬೃಹತ್ ಮೊತ್ತದ ಗುರಿ ನೀಡಿತ್ತು.

ಇಂಗ್ಲೆಂಡ್ ನೀಡಿದ 323 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾದ ನಿಗದಿತ ಓವರ್ ನಲ್ಲಿ 236 ರನ್ ಗಳಿಗೆ ಆಲೌಟ್ ಆಗಿದ್ದು 86 ರನ್ ಗಳಿಂದ ಜಯ ಗಳಿಸಿದೆ.

ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 15, ಶಿಖರ್ ಧವನ್ 36, ವಿರಾಟ್ ಕೊಹ್ಲಿ 45, ಸುರೇಶ್ ರೈನಾ 46, ಎಂಎಸ್ ಧೋನಿ 37 ಮತ್ತು ಹಾರ್ದಿಕ್ ಪಾಂಡ್ಯ 21 ರನ್ ಬಾರಿಸಿದ್ದಾರೆ.

ಇಂಗ್ಲೆಂಡ್ ಪರ ಬೌಲಿಂಗ್ ನಲ್ಲಿ ಪ್ಲುಂಕೇಟ್ 4, ವಿಲ್ಲಿ ಮತ್ತು ರಶೀದ್ 2 ವಿಕೆಟ್ ಪಡೆದಿದ್ದಾರೆ.

ಇಂಗ್ಲೆಂಡ್ ಪರ ಜೋಸನ್ ರಾಯ್ 40, ಬೈರ್ಸ್ಟೋವ್ 38, ಜೋ ರೂಟ್ ಅಜೇಯ 113, ಇಯಾನ್ ಮೋರ್ಗನ್ 53 ಮತ್ತು ವಿಲ್ಲಿ 50 ರನ್ ಬಾರಿಸಿದ್ದಾರೆ.

ಭಾರತ ಪರ ಕುಲ್ದೀಪ್ ಯಾದವ್ 3, ಉಮೇಶ್ ಯಾದವ್, ಹಾರ್ದಿಕ್ ಪಾಂಡ್ಯ ಮತ್ತು ಯಜುವೇಂದ್ರ ಚಹಾಲ್ ತಲಾ 1 ವಿಕೆಟ್ ಪಡೆದಿದ್ದಾರೆ.

ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ 1 ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಮೂರನೇ ಹಾಗೂ ಅಂತಿಮ ಪಂದ್ಯದ ನಿರ್ಣಾಯಕ ಪಂದ್ಯವಾಗಲಿದೆ.

Comments are closed.