ಕ್ರೀಡೆ

ಪ್ರಬಲ ತಂಡ ಬ್ರೆಜಿಲ್’ನ್ನು ಸೋಲಿಸುವ ಮೂಲಕ ಸೆಮಿ ಫೈನಲಿಗೆ ಲಗ್ಗೆ ಇಟ್ಟ ಬೆಲ್ಜಿಯಂ

Pinterest LinkedIn Tumblr

ಮಾಸ್ಕೊ: ರಷ್ಯಾದಲ್ಲಿ ಸಾಗುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ 2018 ಟೂರ್ನಿಯಲ್ಲಿ ಮಗದೊಂದು ಪ್ರಬಲ ತಂಡದ ಕನಸು ನೂಚ್ಚುನೂರಾಗಿದೆ.

ಶುಕ್ರವಾರ ನಡೆದ ಜಿದ್ದಾಜಿದ್ದಿನ ಕ್ವಾರ್ಟರ್ ಫೈನಲ್ ಮುಖಾಮುಖಿಯಲ್ಲಿ ಬೆಲ್ಜಿಯಂ ವಿರುದ್ಧ 2-1 ಗೋಲುಗಳ ಅಂತರದ ಸೋಲಿಗೆ ಶರಣಾಗಿರುವ ಬ್ರೆಜಿಲ್ ಕನಸು ಭಗ್ನಗೊಂಡಿದೆ.

ಪಂದ್ಯದ 13ನೇ ನಿಮಿಷದಲ್ಲಿ ಫೆರ್ನಾಂಡಿನೊ ನೀಡಿದ ಸೆಲ್ಫ್ ಗೋಲ್‌ನಿಂದಾಗಿ ಬ್ರೆಜಿಲ್ ಹಿನ್ನಡೆ ಅನುಭವಿಸಬೇಕಾಯಿತು.

ಬೆಲ್ಜಿಯಂ ಪರ 31ನೇ ನಿಮಿಷದಲ್ಲಿ ಕೆವಿನ್ ಡಿ ಬ್ರೂಯ್ನ್ ವಿಜಯ ಗೋಲು ದಾಖಲಿಸಿದರು. ಇದರಂತೆ ಮೊದಲಾರ್ಧದಲ್ಲಿ 2-0 ಅಂತರದ ಮುನ್ನಡೆ ದಾಖಲಿಸಿತು.

ಪಂದ್ಯದ ಉತ್ತರಾರ್ಧದಲ್ಲಿ ಬ್ರೆಜಿಲ್ ಸತತ ಪ್ರಯತ್ನವನ್ನು ಮಾಡಿದರೂ ಯಾವುದೇ ಪ್ರಯೋಜನವುಂಟಾಗಲಿಲ್ಲ. ಆದರೂ 76ನೇ ನಿಮಿಷದಲ್ಲಿ ರೆನಟೊ ಆಗಸ್ಟೊ ಗೋಲು ಬಾರಿಸುವ ಮೂಲಕ ಸೋಲಿನ ಅಂತರವನ್ನು ತಗ್ಗಿಸಿದರು.

ಇದರೊಂದಿಗೆ ಆಧುನಿಕ ಫುಟ್ಬಾಲ್ ಜಗತ್ತಿನ ಸ್ಟಾರ್ ನೆಯ್ಮಾರ್ ವಿಶ್ವಕಪ್ ಕನಸು ಭಗ್ನಗೊಂಡಿದೆ.

Comments are closed.