ಕ್ರೀಡೆ

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಕಳಪೆ ಮೊತ್ತಕ್ಕೆ ಆಲೌಟ್ ಆಗಿ ದಾಖಲೆ ಬರೆದ ಬಾಂಗ್ಲಾ ! ವಿಂಡೀಸ್ ವಿರುದ್ಧ 43 ರನ್ ಗೆ ಆಲೌಟ್

Pinterest LinkedIn Tumblr

ಆ್ಯಂಟಿಗುವಾ: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಕಳಪೆ ಮೊತ್ತಕ್ಕೆ ಆಲೌಟ್ ಆಗುವ ಮೂಲಕ ದಾಖಲೆ ಬರೆದಿದೆ.

ವೆಸ್ಟ್ ಇಂಡೀಸ್ ನ ಆ್ಯಂಟಿಗುವಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು, ಕೇವಲ 43 ರನ್ ಗಳಿಗೆ ಆಲೌಟ್ ಆಗುವ ಮೂಲಕ ಕಳಪೆ ಪ್ರದರ್ಶನದಲ್ಲೂ ದಾಖಲೆ ಬರೆದಿದೆ.

ಆಂಟಿಗುವಾದಲ್ಲಿ ಬುಧವಾರ ಆರಂಭವಾದ ಟೆಸ್ಟ್ ಪಂದ್ಯದ ಮೊದಲ ದಿನ ಭೋಜನ ವಿರಾಮಕ್ಕೂ ಮುನ್ನವೇ ಬಾಂಗ್ಲಾ ತನ್ನ ಎಲ್ಲ ವಿಕೆಟ್ ಕಳೆದುಕೊಂಡು ಮೊದಲ ಇನ್ನಿಂಗ್ಸ್ ಗೆ ತೆರೆಎಳೆದುಕೊಂಡಿದೆ. ಆ ಮೂಲಕ ಟೆಸ್ಚ್ ಕ್ರಿಕೆಟ್ ಇತಿಹಾಸದಲ್ಲಿ ಮತ್ತೆ ಬಾಂಗ್ಲಾದೇಶ ತನ್ನ ಕಳಪೆ ಪ್ರದರ್ಶನದ ಮೂಲಕ ದಾಖಲೆ ಪಟ್ಟಿ ಸೇರಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ ಪರ ಆರಂಭಿಕ ಲಿಟನ್‌ ದಾಸ್‌ ಹೊರತುಪಡಿಸಿ ಉಳಿದ ಯಾರೂ ಎರಡಂಕಿ ಮೊತ್ತ ಕೂಡ ಸಂಪಾದಿಸಲಿಲ್ಲ. ನಾಲ್ವರು ಪ್ರಮುಖ ಆಟಗಾರರು ಶೂನ್ಯ ಸಂಪಾದಿಸಿ, ಬಾಂಗ್ಲಾ ಪತನಕ್ಕೆ ಕಾರಣವಾದರು.

ಪ್ರಮುಖವಾಗಿ ವೆಸ್ಟ್ ಇಂಡೀಸ್ ಪರ ಅದ್ಬುತ ಬೌಲಿಂಗ್ ಪ್ರದರ್ಶನ ನೀಡಿದ ಕೆಮರ್ ರೋಚ್ 5 ವಿಕೆಟ್ ಪಡೆದರೆ, ಕೆಮಿನ್ಸ್ 3 ಹಾಗೂ ಹೋಲ್ಡರ್ 2 ವಿಕೆಟ್ ಪಡೆದರು.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 6ನೇ ಅತ್ಯಂತ ಕಳಪೆ ರನ್ ಗಳಿಕೆ
ಇನ್ನು ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಬಾಂಗ್ಲಾದೇಶ ಗಳಿಸಿದ 6ನೇ ಅತ್ಯಂತ ಕಡಿಮೆ ರನ್ ಗಳಿಕೆಯಾಗಿದೆ. ಇದಕ್ಕೂ ಮೊದಲು ಅಂದರೆ 1955ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಕೇವಲ 26ರನ್ ಗಳಿಗೆ ಆಲೌಟ್ ಆಗಿತ್ತು. ಇದು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ಮೊತ್ತವಾಗಿ ದಾಖಲಾಗಿದೆ. ಇದಾದ 1896ರಲ್ಲಿ ಮತ್ತು 1924ರಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ 2 ಬಾರಿ 30 ರನ್ ಗಳಿಗೆ ಆಲೌಟ್ ಆಗಿತ್ತು. ಇದು ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಳಪೆ ರನ್ ಗಳಿಕೆ ಪಟ್ಟಿಯಲ್ಲಿ ಭಾರತ ಕೂಡ ಇದ್ದು 1974ರಲ್ಲಿ ಮತ್ತದೇ ಇಂಗ್ಲೆಂಡ್ ತಂಡದ ವಿರುದ್ಧ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ ಕೇವಲ 42 ರನ್ ಗಳಿಗೆ ಆಲೌಟ್ ಆಗಿತ್ತು. ಇದು ಭಾರತದ ಅತ್ಯಂತ ಕಳಪೆ ಪ್ರದರ್ಶನವಾಗಿ ದಾಖಲಾಗಿದೆ.

Comments are closed.