ಕ್ರೀಡೆ

ಕ್ರಿಕೆಟ್ ನಲ್ಲಿ ಹೆಚ್ಚಾಗಿ ಕಾಣಲ್ಪಡದ ವಿಚಿತ್ರ ರೀತಿಯ ಬೌಲಿಂಗ್ ಆಕ್ಷನ್ ಮೂಲಕ ಸುದ್ದಿಯಾದ ರವಿ ಜೋಶಿ !

Pinterest LinkedIn Tumblr

ಭೋಪಾಲ್: ಮಧ್ಯಪ್ರದೇಶ ಪ್ರಿಮಿಯರ್ ಲೀಗ್(ಎಂಪಿಎಲ್)ನಲ್ಲಿ ರೇವಾ ತಂಡದ ಪರ ಆಡುತ್ತಿರುವ ರವಿ ಜೋಶಿ ತಮ್ಮ ವಿಚಿತ್ರ ರೀತಿಯಲ್ಲಿ ಮೈ ಮುರಿಯುಂತೆ ಮಾಡಿ ಬೌಲಿಂಗ್ ಮಾಡುತ್ತಿರುವುದು ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದೆ. ಕ್ರಿಕೆಟ್ ನಲ್ಲಿ ಹೆಚ್ಚಾಗಿ ಕಾಣಲ್ಪಡದ ಚೈನಾಮ್ಯಾನ್ ಬೌಲಿಂಗ್ ಆಕ್ಷನ್ ಮೂಲಕ ರವಿ ಜೋಶಿ ಸುದ್ದಿಯಾಗಿದ್ದಾರೆ.

21 ವರ್ಷದ ರವಿ ಜೋಶಿ ಬೌಲಿಂಗ್ ಮಾಡುವಾಗ ಹೆಚ್ಚು ಬಾರಿ ಕೈಯನ್ನು ತಿರುಗಿಸುವುದರಿಂದ ಆತನ ಬೌಲಿಂಗ್ ಅನ್ನು ಎದುರಿಸಲು ಬ್ಯಾಟ್ಸ್ ಮನ್ ಗಳು ತಿಣುಕಾಡುತ್ತಿದ್ದಾರೆ. ಬೌಲಿಂಗ್ ಮಾಡುವಾಗ ಚೆಂಡು ತಿರುಗುವುದಕ್ಕಿಂತ ಹೆಚ್ಚು ರವಿ ಜೋಶಿ ದೇಹ ತಿರುಗುವುದೇ ಎಲ್ಲರಿಗೂ ಅಚ್ಚರಿ ಹುಟ್ಟಿಸುವ ವಿಷಯವಾಗಿದೆ.

ದಕ್ಷಿಣ ಆಫ್ರಿಕಾದ ಮಾಜಿ ಬೌಲರ್ ಪೌಲ್ ಆಂಡಮ್ಸ್‌ನ ಬೌಲಿಂಗ್ ಆಕ್ಷನ್ ನ್ನು ರವಿ ಜೋಶಿ ನೆನಪಿಸುತ್ತಿದ್ದಾರೆ. ಈತ ಬೌಲಿಂಗ್ ಮಾಡುವಾಗ ಸರಿಸುಮಾರು 360 ಡಿಗ್ರಿಯಲ್ಲಿ ಶರೀರವನ್ನು ತಿರುಗಿಸಿ ಬೌಲಿಂಗ್ ಮಾಡುವ ಶೈಲಿಯೇ ಹೆಚ್ಚು ಗಮನ ಸೆಳೆದಿದೆ.

ಟೀಂ ಇಂಡಿಯಾ ಪರ ಆಡಬೇಕೆಂಬುದು ನನ್ನ ಹೆಬ್ಬಯಕೆಯಾಗಿದೆ. ಹಲವು ಲೀಗ್ ಟೂರ್ನಿಗಳಲ್ಲಿ ನಾನು ಆಡಿದ್ದೇನೆ ಆದರೆ ಟೀಂ ಇಂಡಿಯಾ ಜೆರ್ಸಿ ತೊಡಬೇಕು ಎಂಬುದು ನನ್ನ ಅಭಿಲಾಶೆ. ಶೀಘ್ರದಲ್ಲೇ ನಾನು ದೆಹಲಿಗೆ ತೆರಳುತ್ತಿದ್ದು ಅಲ್ಲಿ ತರಬೇತಿ ಆರಂಭಿಸುತ್ತೇನೆ ಎಂದು ಹೇಳಿದ್ದಾರೆ.

Comments are closed.