ಕ್ರೀಡೆ

ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ವೃತ್ತಿಜೀವನದ ಶ್ರೇಷ್ಠ 24 ನೇ ಸ್ಥಾನಕ್ಕೇರಿದ ಶಿಖರ್ ಧವನ್

Pinterest LinkedIn Tumblr

ದುಬೈ: ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಟೆಸ್ಟ್ ಕ್ರಿಕೆಟ್‌ ರ‍್ಯಾಂಕಿಂಗ್ ನಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಸ್ಥಾನವನ್ನು ಗಳಿಸಿದ್ಡಾರೆ. ಶಿಖರ್ ಧವನ್ ಟೆಸ್ಟ್ ಕ್ರಿಕೆಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಹತ್ತು ಸ್ಥಾನ ಮೇಲೇರಿ 24ನೇ ಸ್ಥಾನ ಪಡೆದುಕೊಂಡಿದ್ದಾರೆ.

ಅಫ್ಘಾನಿಸ್ತಾನದ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ 107 ರನ್ ಗಳಿಸಿರುವ ಧವನ್ ಟೆಸ್ಟ್ ಪಂದ್ಯದ ಮೊದಲ ದಿನದಂದು ಭೋಜನ ವಿರಾಮಕ್ಕೆ ಮುನ್ನ ಶತಕ ಪೂರೈಸಿದ ಮೊದಲ ಭಾರತೀಯರಾಗಿದ್ದಾರೆ.

ಇದೇ ವೇಳೆ ಭಾರತದ ಇನ್ನಿಬ್ಬರು ಆಟಗಾರರಾದ ಮುರಳಿ ವಿಜಯ್ ಹಾಗು ರವೀಂದ್ರ ಜಡೇಜಾ ಸಹ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೇಲೇರಿದ್ದಾರೆ.

ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ 105 ರನ್ ಗಳಿಸಿದ್ದ ಮುರಳಿ ವಿಜಯ್ 23ನೇ ಸ್ಥಾನಕ್ಕೇರಿದ್ದರೆ ಟೆಸ್ಟ್ ಪಂದ್ಯದಲ್ಲಿ ಆರು ವಿಕೆಟ್ ಪಡೆದ ರವೀಂದ್ರ ಜಡೇಜಾ ಮೂರನೇ ಸ್ಥಾನಕ್ಕೆ ಭಡ್ತಿ ಹೊಂದಿದ್ದಾರೆ.

ಇಶಾಂತ್ ಶರ್ಮಾ (25), ಉಮೇಶ್ ಯಾದವ್ (26), ಸ್ಥಾನ ಪಡೆಯುವುದರೊಡನೆ ಶ್ರೇಯಾಂಕ ಪಟ್ಟಿಯಲ್ಲಿ ಮುನ್ನಡೆ ಹೊಂದಿದ್ದಾರೆ.

ಏತನ್ಮಧ್ಯೆ ಅಪ್ಘಾನಿಸ್ಥಾನ ಬ್ಯಾಟ್ಸ್ ಮನ್ ಗಳಾದ ಹಶ್ಮುತುಲ್ಲಾ ಶಾಹಿದ್ (111), ನಾಯಕ ಅಸ್ಗರ್ ಸ್ಟ್ಯಾನಿಕ್ಜಾಯ್ (136) ರಶೀದ್ ಖಾನ್ (119) ಸಹ ಆಟಗಾರರ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಭಾರತ ತಂಡ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ.

Comments are closed.