ಕ್ರೀಡೆ

ವಿರಾಟ್ ಕೊಹ್ಲಿಯ ಗಡ್ಡಕ್ಕೆ ವಿಮೆ! ಕೆ.ಎಲ್. ರಾಹುಲ್ ಈ ಬಗ್ಗೆ ಹೇಳಿದ್ದೇನು..?

Pinterest LinkedIn Tumblr

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಆಟಗಾರರಲ್ಲಿ ಒಬ್ಬರು. ಆದರೆ ಸುದ್ದಿ ಅದಲ್ಲ, ಅವರು ತಮ್ಮ ಗಡ್ಡದ ಬಗೆಗೆ ತುಂಬಾ ಅಭಿಮಾನ ಹೊಂದಿದ್ದು ಆ ಗಡ್ಡಕ್ಕೆ ಸಹ ವಿಮೆ ಮಾಡಿಸಿದ್ದಾರೆ!

ಟೀಂ ಇಂಡಿಯಾ ನಾಯಕ ಗಡ್ಡಕ್ಕೆ ವಿಮೆ ಮಾಡಿಸಿಕೊಂಡಿದ್ದಾರೆಂದು ಹೇಳುವ ವೀಡಿಯೋ ಒಂದನ್ನು ಕ್ರಿಕೆಟಿಗ ಕೆ.ಎಲ್. ರಾಹುಲ್ ತನ್ನ ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ

ವೀಡಿಯೋದಲ್ಲಿ ಸೂಟುಧಾರಿಗಳಾದ ಕೆಲವರು ಕೊಹ್ಲಿ ಅವರ ಗಡ್ಡದ ಅಳತೆ ತೆಗೆದುಕೊಳ್ಳುತ್ತಿರುವ ದೃಶ್ಯಗಳಿದ್ದು ಅದೇ ವೇಳೆ ಇನ್ನೋರ್ವ ವ್ಯಕ್ತಿ ಕೊಹ್ಲಿ ಅವರ ವಿವಿಧ ಭಂಗಿಯ ಫೋಟೋಗಳನ್ನು ತೆಗೆದುಕೊಳ್ಳುತ್ತಿರುವುದು ಸಹ ಕೊಠಡಿಯ ಸಿಸಿವಿಟಿಯಲ್ಲಿ ಸೆರೆಯಾಗಿದೆ.

ರಾಹುಲ್ ತಮ್ಮ ಟ್ವೀಟ್ ಕೊಹ್ಲಿಯವರ ಕಾಲೆಳೆದಿದ್ದು “ನಿಮಗೆ ಗಡ್ಡದ ಕುರಿತಂತೆ ಗೀಳು ಇದೆ ಎನ್ನುವುದು ನನಗೆ ಗೊತ್ತಿತ್ತು. ಆದರೆ ನೀವೀಗ ಗಡ್ಡಕ್ಕೆ ವಿಮೆ ಮಾಡಿಸುತ್ತಿರುವ ಸುದ್ದಿ ನನ್ನ ಯೋಚನೆಗೆ ಇನ್ನಷ್ಟು ಬಲ ತುಂಬಿದೆ” ಎಂದಿದ್ದಾರೆ.

ಏತನ್ಮಧ್ಯೆ ಗಾಯದ ಸಮಸ್ಯೆಯಿಂದಾಗಿ ಅಫಘಾನಿಸ್ತಾನ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿರುವ ಕೊಹ್ಲಿ ಜೂನ್ 15 ರಂದು ಬೆಂಗಳೂರಿನಲ್ಲಿ ಫಿಟ್‍ನೆಸ್ ಪರೀಕ್ಷೆ ಎದುರಿಸಲಿದ್ದಾರೆ.

Comments are closed.