ಕ್ರೀಡೆ

ಫಿಟ್ನೆಸ್​ ಕಾಪಾಡಲು ಏನೂ ಮಾಡುತ್ತಾರೆ ಎಂಬುದರ ರಹಸ್ಯ ಬಿಚ್ಚಿಟ್ಟ ವಿರಾಟ್ ಕೊಹ್ಲಿ?

Pinterest LinkedIn Tumblr


ವಿರಾಟ್​ ಕೊಹ್ಲಿಯ ಫಿಟ್ನೆಸ್​ಗೆ ಸಂಬಂಧಿಸಿದಂತೆ ಅವರ ಅಭಿಮಾನಿಗಳು ಅದೆಷ್ಟು ಉತ್ಸುಕರಾಗಿದ್ದಾರೆ ಎಂಬುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಮೈದಾನದಲ್ಲಿ ಆಕರ್ಷಕ ಶಾಟ್ಸ್​ ಹೊಡೆಯುವುದರಿಂದ ಹಿಡಿದು ವಿಕೆಟ್​ಗಳ ಮಧ್ಯೆ ಚಿರತೆಯಂತೆ ಓಡುವ ಹಾಗೂ ಮೈದಾನಲ್ಲಿ ಗಮನವಹಿಸಿ ಆಡುವ ವಿರಾಟ್​ ಕೊಹ್ಲಿಯನ್ನು ಕಂಡರೆ ಅವರು ವಿಶ್ವದ ಅತ್ಯಂತ ಫಿಟ್​ ಕ್ರಿಕೆಟಿಗರಲ್ಲಿ ಒಬ್ಬರು ಎಂಬುವುದು ಸಾಬೀತಾಗುತ್ತದೆ. ಪೀಲ್ಡ್​ನಲ್ಲಿ ಹಾಗೂ ಮೈದಾನದಿಂದ ಹೊರಗೂ ವಿರಾಟ್​ ಕೊಹ್ಲಿ ತಮ್ಮ ಫಿಟ್ನೆಸ್​ಗೆ ಸಂಬಂಧಿಸಿದಂತೆ ಬಹಳಷ್ಟು ನಿಗಾ ವಹಿಸುತ್ತಾರೆ.

ಪ್ರತಿಯೊಬ್ಬ ಭಾರತೀಯನೂ ವಿರಾಟ್​ ಕೊಹ್ಲಿಯಿಂದ ಫಿಟ್ನೆಸ್​ನ ಪ್ರೇರಣೆ ಪಡೆಯುತ್ತಾರೆ. ಅವರು ಪ್ರತಿದಿನ ತಮ್ಮ ಹೆಚ್ಚಿನ ಸಮಯವನ್ನು ಜಿಮ್​ ಮಾಡುವುದರಲ್ಲೇ ಕಳೆಯುತ್ತಾರೆ. ಇಲ್ಲಿ ಅವರು ಕಾರ್ಡಿಯೋ ಟ್ರೇನಿಂಗ್ ಮಾಡುತ್ತಾರೆ. ಇತ್ತೀಚೆಗಷ್ಟೇ ಪತ್ರಿಕೆಯೊಂದು ಕೊಹ್ಲಿಯ ಸಂದರ್ಶನ ನಡೆಸಿದ್ದು, ಈ ಸಂದರ್ಭದಲ್ಲಿ ಟೀಂ ಇಂಡಿಯಾದ ನಾಯಕ ಹಲವು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅವರು ತಮ್ಮ ಫಿಟ್ನೆಸ್​ ಲೆವೆಲ್, ಫಿಟ್ನೆಸ್​ ಐಡಲ್, ತಾನು ಪ್ರತಿನಿತ್ಯ ಓಡುವ ದೂರ, ವೇಯ್ಟ್​ ಲಿಫ್ಟಿಂಗ್ ಹಾಗೂ ತಮ್ಮಿಷ್ಟದ ತಿಂಡಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ವಿರಾಟ್​ ಬಳಿ ನೀವು ನಿಮ್ಮ ಜೀವನದಲ್ಲಿ ಅತಿ ಹೆಚ್ಚು ಫಿಟ್​ ಆಗಿದ್ದು ಯಾವಾಗ ಎಂದು ಕೇಳಿದಾಗ ‘ಈಗ ನಾನು ಅತ್ಯಂತ ಫಿಟ್​ ಆಗಿದ್ದೇನೆ’ ಎಂದು ಉತ್ತರಿಸಿದ್ದಾರೆ.

ವಿರಾಟ್ ಬಳಿ ಫಿಟ್ನೆಸ್​ಗೆ ನಿಮಗೆ ಪ್ರೇರಣೆ ಯಾರಿಂದ ಸಿಗುತ್ತದೆ ಎಂದು ಪ್ರಶ್ನಿಸಿದಾಗ ನಿಜ ಹೇಳಬೇಕೆಂದರೆ ನನಗೆ ಯಾರಿಂದಲೂ ಪ್ರೇರಣೆ ಸಿಕ್ಕಿಲ್ಲ. ನನ್ನಷ್ಟಕ್ಕೇ ನಾನಿದನ್ನು ಅರ್ಥೈಸಿಕೊಂಡಿದ್ದೇನೆ. ಹೀಗಾಗಿ ನಾನು ಯಾರನ್ನೂ ಫಾಲೋ ಮಾಡುವುದಿಲ್ಲ ಎಂದಿದ್ದಾರೆ.

ನೀವು ಹೆಚ್ಚೆಂದರೆ ಎಷ್ಟು ದೂರದ ಓಟ ಓಡಿದ್ದೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ ಪ್ರತಿ ಗಂಟೆಗೆ 14 ಕಿ. ಮೀಟರ್​ ವೇಗದಲ್ಲಿ 20 ನಿಮಿಷ ಓಡಿದ್ದೇನೆ ಎಂದು ಉತ್ತರಿಸಿದ್ದಾರೆ.

ಅತಿ ಹೆಚ್ಚೆಂದರೆ ಎಷ್ಟು ಭಾರ ಹೊತ್ತಿದ್ದೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಕ್ಯಾಪ್ಟನ್ ಕೊಹ್ಲಿ 145 ಕಿಲೋ ಡೆಡ್​ ಲಿಫ್ಟ್​ ಅತ್ಯಂತ ಹೆಚ್ಚು ಭಾರವಾಗಿತ್ತು ಎಂದಿದ್ದಾರೆ.

Comments are closed.