ಕ್ರೀಡೆ

ಹೈದರಾಬಾದ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟ ಚೆನ್ನೈ ಸೂಪರ್ ಕಿಂಗ್ಸ್

Pinterest LinkedIn Tumblr

ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡ 140 ರನ್‌ಗಳ ಗುರಿಯನ್ನು ಮುಂದಿಟ್ಟಿತ್ತು. ಇದನ್ನು ಬೆನ್ನತ್ತಿದ ಚೆನ್ನೈ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡಿತು. ಒಂದು ಹಂತದಲ್ಲಿ 62 ರನ್‌ಗಳಿಗೆ ಆರು ವಿಕೆಟ್‌ಗಳು ಉರುಳಿದ್ದವು. ಆದರೆ ಆರಂಭಿಕ ಬ್ಯಾಟ್ಸ್‌ಮನ್‌ ಫಾಫ್ ಡು ಪ್ಲೆಸಿ (67; 42 ಎ, 4 ಸಿ, 5 ಬೌಂ) ಎದುರಾಳಿ ಬೌಲರ್‌ಗಳನ್ನು ಏಕಾಂಗಿಯಾಗಿ ಎದುರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಬ್ರಾಥ್‌ವೇಟ್ ಹೋರಾಟ: ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್‌ ಪಂದ್ಯದ ಮೊದಲ ಎಸೆತದಲ್ಲೇ ಸ್ಫೋಟಕ ಬ್ಯಾಟ್ಸ್‌ಮನ್‌ ಶಿಖರ್ ಧವನ್ ಅವರನ್ನು ಕಳೆದುಕೊಂಡಿತು. ಎರಡನೇ ವಿಕೆಟ್‌ಗೆ ಶ್ರೀವತ್ಸ ಗೋಸ್ವಾಮಿ ಮತ್ತು ಕೇನ್ ವಿಲಿಯಮ್ಸನ್‌ 34 ರನ್‌ ಸೇರಿಸಿದರು.

ಎರಡು ರನ್‌ಗಳ ಅಂತರದಲ್ಲಿ ಇವರಿಬ್ಬರ ವಿಕೆಟ್‌ಗಳು ಉರುಳಿದವು. ಮನೀಷ್ ಪಾಂಡೆ ಕೂಡ ಬೇಗ ವಾಪಸಾದರು. ಶಕೀಬ್‌ ಅಲ್ ಹಸನ್ ಮತ್ತು ಯೂಸುಫ್ ಪಠಾಣ್‌ ಅವರನ್ನು ಔಟ್‌ ಮಾಡಿದ ಡ್ವೇನ್ ಬ್ರಾವೊ ಸೂಪರ್ ಕಿಂಗ್ಸ್‌ಗೆ ಮೇಲುಗೈ ಒದಗಿಸಿದರು. ತಂಡ ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಬಂದ ಕಾರ್ಲೋಸ್ ಬ್ರಾಥ್‌ವೇಟ್‌ ಸ್ಫೋಟಕ ಬ್ಯಾಟಿಂಗ್ ಮಾಡಿದರು. 29 ಎಸೆತಗಳಲ್ಲಿ 4 ಸಿಕ್ಸರ್ ಮತ್ತು ಒಂದು ಬೌಂಡರಿಯೊಂದಿಗೆ 43 ರನ್ ಗಳಿಸಿದ ಅವರು ತಂಡದ ಮೊತ್ತವನ್ನು ಮೂರಂಕಿ ದಾಟಿಸಿದರು.

Comments are closed.