ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2018 ರ ಟೂರ್ನಿಯ ವಿದೇಶಿ ಆಟಗಾರರಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿ ಇಂಗ್ಲೆಂಡ್ ನ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಗಮನ ಸೆಳೆದಿದ್ದರು. ಆದರೆ ರಾಜಸ್ಥಾನ ಪರ ಆಡಿದ್ದ ಸ್ಟೋಕ್ 13 ಇನ್ನಿಂಗ್ಸ್ ಗಳಿಂದ ಕೇವಲ 196 ರನ್ ಗಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಐಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆಲ್ಲಿ ಬೆನ್ ಸ್ಟೋಕ್ಸ್ ರನ್ನು ರಾಜಸ್ಥಾನ ರಾಯಲ್ಸ್ 12.5 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ ಟೂರ್ನಿಯಲ್ಲಿ ಬೆನ್ ಸ್ಟೋಕ್ಸ್ 13 ಇನ್ನಿಂಗ್ಸ್ ಗಳಿಂದ 196 ರನ್ ಗಳಿಸಿದ್ದು ಅವರು ಪಡೆದ ಮೊತ್ತಕ್ಕೆ ಹೋಲಿಸಿದರೆ ಪ್ರತಿ ರನ್ ಗೆ 6.37 ಲಕ್ಷ ರೂ. ನೀಡಿದಂತಾಗುತ್ತದೆ. ಇನ್ನು ಈ ಟೂರ್ನಿಯಲ್ಲಿ ಸ್ಟ್ರೋಕ್ಸ್ 8 ವಿಕೆಟ್ ಪಡೆದಿದ್ದು, ಪ್ರತಿ ವಿಕೆಟ್ ಗೆ 1.56 ಕೋಟಿ ನೀಡಿದಂತಾಗುತ್ತದೆ. 26 ವರ್ಷದ ಬೆನ್ ಸ್ಟ್ರೋಕ್ ಟೂರ್ನಿಯ ಮಧ್ಯದಲ್ಲೇ ರಾಷ್ಟ್ರೀಯ ತಂಡದ ಪರ ಆಡಲು ಹಿಂದಿರುಗಿದ್ದಾರೆ.
ಸದ್ಯ ರಾಜಸ್ಥಾನ ರಾಯಲ್ಸ್ ತಂಡ ಟೂರ್ನಿಯಲ್ಲಿ 14 ಪಂದ್ಯಗಳಲ್ಲಿ 7 ರಲ್ಲಿ ಜಯಗಳಿಸಿ 14 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಆರ್ ಸಿಬಿ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಕನ್ನಡಿಗ ಗೋಪಾಲ್ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿ ಆರ್ ಸಿಬಿ ಸೋಲಿಗೆ ಕಾರಣರಾದರು. ಪಂದ್ಯದಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರ 4 ವಿಕೆಟ್ ಪಡೆದ ಗೋಪಾಲ್ ಕೇವಲ 16 ರನ್ ಬಿಟ್ಟುಕೊಟ್ಟರು. ತಂಡದ ಗೆಲುವಿಗೆ ಕಾರಣರಾದ ಗೋಪಾಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು.
Comments are closed.