ಕ್ರೀಡೆ

ರಾಹುಲ್ ಹೋರಾಟ ವ್ಯರ್ಥ; ಪಂಜಾಬ್ ವಿರುದ್ಧ ಮುಂಬೈಗೆ ರೋಚಕ ಜಯ: ಪ್ಲೇ ಆಫ್‌’ ಪ್ರವೇಶಿಸುವ ಮುಂಬೈ ಕನಸನ್ನು ಜೀವಂತ

Pinterest LinkedIn Tumblr

ಮುಂಬೈ : ಜಸ್‌ಪ್ರೀತ್‌ ಬೂಮ್ರಾ (15ಕ್ಕೆ3) ಮತ್ತು ಮಿಷೆಲ್‌ ಮೆಕ್‌ಲೆನಾಗನ್‌ (37ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಮುಂಬೈ ಇಂಡಿಯನ್ಸ್‌ ತಂಡ ಐಪಿಎಲ್‌ 11ನೇ ಆವೃತ್ತಿಯ ಪಂದ್ಯದಲ್ಲಿ ಮೂರು ರನ್‌ಗಳಿಂದ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ವಿರುದ್ಧ ಗೆದ್ದಿದೆ.

ಇದರೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿರುವ ರೋಹಿತ್‌ ಶರ್ಮಾ ಬಳಗ ‘ಪ್ಲೇ ಆಫ್‌’ ಪ್ರವೇಶಿಸುವ ಕನಸನ್ನು ಜೀವಂತವಾಗಿ ಇಟ್ಟುಕೊಂಡಿದೆ.

ಆರ್‌ಸಿಬಿ, ರಾಜಸ್ಥಾನ್‌ ರಾಯಲ್ಸ್‌, ಕಿಂಗ್ಸ್‌ ಇಲೆವನ್‌ ಪಂಜಾಬ್‌ ಮತ್ತು ಕೋಲ್ಕತ್ತ ನೈಟ್‌ರೈಡರ್ಸ್‌ ತಂಡಗಳೂ ಪ್ಲೇ ಆಫ್‌ ರೇಸ್‌ನಲ್ಲಿವೆ.

ಮೊದಲು ಬ್ಯಾಟಿಂಗ್ ಗೆ ಇಳಿದ ಮುಂಬೈ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತ್ತು. ಮುಂಬೈ ಪರ ಕೀರನ್​ ಪೋಲಾರ್ಡ್​(50), ಕೃನಾಲ್​ ಪಾಂಡ್ಯ(32) ಹಾಗೂ ಸೂರ್ಯ ಕುಮಾರ್​ ಯಾದವ್​ ​(27) ರನ್ ಗಳಿಸಿದ್ದರು.

ಪಂಜಾಬ್ ಪರವಾಗಿ ಆ್ಯಂಡ್ರಿವ್​ ಟೈ 4 ವಿಕೆಟ್​, ರವಿಚಂದ್ರನ್​ ಅಶ್ವಿನ್​ 2, ಅಂಕಿತ್​ ರಜಪೂತ್​ ಹಾಗೂ ಮಾರ್ಕಸ್​ ಸ್ಟೋನೀಸ್​ ತಲಾ​ ಒಂದು ವಿಕೆಟ್​ ಪಡೆದು ಮಿಂಚಿದರು.

ಮುಂಬೈ ನಿಂದ ಗೆಲುವಿಗೆ 187 ರನ್​ ಗುರಿ ಪಡೆದ ಪಂಜಾಬ್ ನಿಗದಿತ ಓವರ್ ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 183 ರನ್​ ಕಲೆಹಾಕುವದಕ್ಕಷ್ಟೇ ಸಮರ್ಥವಾಯಿತು.

ಪಂಜಾಬ್ ಪರ ಕನ್ನಡಿಗ ಕೆ.ಎಲ್ ರಾಹುಲ್ ಸಿಡಿಸಿದ್ದ ಅರ್ಧಶತಕ ಸಹ ((94) ತಂಡದ ನೆರವಿಗೆ ಬರಲಿಲ್ಲ. ಇನ್ನು ಆ್ಯರೂನ್​ ಫಿಂಚ್​(46) ಸಹ ಉತ್ತಮ ಪ್ರದರ್ಶನ ನೀಡಿದ್ದರೂ ತಂಡ ಗೆಲುವಿನ ದಡ ತಲುಪಲು ವಿಫಲಾಯಿತು.

ಮುಂಬೈನ ಜಸ್ಪ್ರಿತ್​ ಬೂಮ್ರಾ 3, ಮೈಕೆಲ್​ ಮೆಕ್ಲಹೆಂಗನ್ 2ವಿಕೆಟ್ ಗಳಿಸಿಕೊಂಡರು.

Comments are closed.