ಕ್ರೀಡೆ

ಎಬಿಡಿ-ಕೊಹ್ಲಿ ಬ್ಯಾಟಿಂಗ್ ಅಬ್ಬರಕ್ಕೆ ಶರಣಾದ ಡೆಲ್ಲಿ; ಆರ್ ಸಿಬಿಗೆ 5 ವಿಕೆಟ್ ಗಳ ಜಯ

Pinterest LinkedIn Tumblr

ದೆಹಲಿ: ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಮೇ.12 ರಂದು ನಡೆದ ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ನ ಬಿರುಸಿನ ಬ್ಯಾಟಿಂಗ್ ಪರಿಣಾಮವಾಗಿ ಡೆಲ್ಲಿ ತಂಡದ ವಿರುದ್ಧ ಆರ್ ಸಿಬಿ 5 ವಿಕೆಟ್ ಗಳ ಜಯ ದಾಖಲಿಸಿದೆ.

ಶನಿವಾರ ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ತಂಡವು ರಿಷಭ್ ಪಂತ್‌ ಅರ್ಧಶತಕದ (61; 34ಎ, 5ಬೌಂ, 4ಸಿ) ಬಲದಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 181 ರನ್‌ ಗಳಿಸಿತು. ರಿ ಬೆನ್ನತ್ತಿದ ಆರ್‌ಸಿಬಿ ತಂಡವು 19 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 187 ರನ್‌ ದಾಖ
ಲಿಸಿತು. ಇದರಿಂದಾಗಿ ಪ್ಲೇ ಆಫ್‌ ಹಂತಕ್ಕೆ ಪ್ರವೇಶಿಸುವ ಆರ್‌ಸಿಬಿ ಆಸೆ ಜೀವಂತವಾಗುಳಿಯಿತು.

ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿಯೇ ಯಶಸ್ಸನ್ನೂ ಗಳಿಸಿತು. ಸ್ಪಿನ್ನರ್ ಯಜುವೇಂದ್ರ ಚಾಹಲ್ (28ಕ್ಕೆ2) ತಮ್ಮ ಮಣಿಕಟ್ಟಿನ ಮೋಡಿ ತೋರಿಸಿದರು. ಇದರಿಂದಾಗಿಡೆಲ್ಲಿ ತಂಡವು 2.4 ಓವರ್‌ಗಳಲ್ಲಿ16 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತು.

ತಂಡದ ನಾಯಕ ಶ್ರೇಯಸ್ ಅಯ್ಯರ್ (32 ರನ್) ಮತ್ತು ಪಂತ್ ಅವರು ವಿಕೆಟ್‌ ಪತನವನ್ನು ತಡೆದರು. ಮೂರನೇ ವಿಕೆಟ್‌ಗೆ 93 ರನ್‌ ಸೇರಿಸಿದರು. ಈ ಹಂತದಲ್ಲಿ ಆರ್‌ಸಿಬಿ ಬೌಲರ್‌ಗಳು ಮಂಕಾದರು. 13ನೇ ಓವರ್‌ ಬೌಲಿಂಗ್ ಮಾಡಿದ ಮೋಯಿನ್ ಅಲಿ ಅವರು ಪಂತ್ ಅವರನ್ನು ಔಟ್ ಮಾಡಿದರು. ಎರಡು ಓವರ್‌ಗಳ ನಂತರ ಅಯ್ಯರ್ ಕೂಡ ನಿರ್ಗಮಿಸಿದರು.

ನಂತರ ಕ್ರೀಸ್‌ನಲ್ಲಿ ಜೊತೆಗೂಡಿದ ವಿಜಯಶಂಕರ್ (ಔಟಾಗದೆ 21; 20ಎ, 2ಬೌಂ) ಮತ್ತು ಅಭಿಷೇಕ್ ಶರ್ಮಾ (ಔಟಾಗದೆ 46;19ಎ,3ಬೌಂ 4ಸಿ) ಅವರು ಬೌಲರ್‌ಗಳ ಬೆವರಿಳಿಸಿದರು. ಅದರಲ್ಲೂ ಅಭಿಷೇಕ್ ಅವರ ಬೀಸಾಟ ರಂಗೇರಿತು. ಅದರಿಂದಾಗಿ ಕೊನೆಯ ನಾಲ್ಕು ಓವರ್‌ಗಳಲ್ಲಿ 48 ರನ್‌ಗಳು ಹರಿದು ಬಂದವು. ಡೆಲ್ಲಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಅವಕಾಶವನ್ನು ವಿರಾಟ್ ಬಳಗವು ಕೈಚೆಲ್ಲಿತು.

ಸಂಕ್ಷಿಪ್ತ ಸ್ಕೋರ್: ಡೆಲ್ಲಿ ಡೇರ್‌ಡೆವಿಲ್ಸ್‌: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 181 (ಜೇಸನ್ ರಾಯ್ 12, ಶ್ರೇಯಸ್ ಅಯ್ಯರ್ 32, ರಿಷಭ್ ಪಂತ್ 61, ವಿಜಯಶಂಕರ್ ಔಟಾಗದೆ 21, ಅಭಿಷೇಕ್ ಶರ್ಮಾ ಔಟಾಗದೆ 46, ಯಜುವೇಂದ್ರ ಚಾಹಲ್ 26ಕ್ಕೆ2, ಮೋಯಿನ್ ಅಲಿ 25ಕ್ಕೆ1, ಮೊಹಮ್ಮದ್ ಸಿರಾಜ್ 46ಕ್ಕೆ1) ಆರ್‌ಸಿಬಿ: 19 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 187 (ವಿರಾಟ್ ಕೊಹ್ಲಿ 70, ಎಬಿ ಡಿವಿಲಿಯರ್ಸ್ ಔಟಾಗದೆ 72, ಮನದೀಪ್ ಸಿಂಗ್ 13, ಟ್ರೆಂಟ್‌ ಬೌಲ್ಟ್‌ 40ಕ್ಕೆ2, ಸಂದೀಪ್‌ ಲಮಿಚಾನೆ 25ಕ್ಕೆ 1, ಹರ್ಷಲ್‌ ಪಟೇಲ್‌ 51ಕ್ಕೆ 1, ಅಮಿತ್‌ಮಿಶ್ರಾ 33ಕ್ಕೆ 1)

ಫಲಿತಾಂಶ: ಆರ್‌ಸಿಬಿ ತಂಡಕ್ಕೆ 5 ವಿಕೆಟ್‌ಗಳ ಜಯ.
ಪಂದ್ಯ ಶ್ರೇಷ್ಠ: ಎಬಿ ಡಿವಿಲಿಯರ್ಸ್

Comments are closed.