
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಬೌಲ್ಡ್ ಆಗುತ್ತಿದ್ದಂತೆ ಖ್ಯಾತ್ ಸ್ಪಿನ್ನರ್ ರವೀಂದ್ರ ಜಡೇಜಾರನ್ನು ಗುರಾಯಿಸಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Jaddu:VK – Reactions surprise all around https://t.co/UFK4m1FJDY via @ipl
— Aratrick (@crlmaratrick) May 5, 2018
ಇನ್ನು ಕುತೂಹಲಕಾರಿ ಸಂಗತಿ ಎಂದರೆ ತನ್ನ ಮೊದಲ ಎಸೆತದಲ್ಲಿ ವಿರಾಟ್ ಕೊಹ್ಲಿಯನ್ನು ಬೌಲ್ಡ್ ಮಾಡಿದ್ದ ರವೀಂದ್ರ ಜಡೇಜಾ ಸಂಭ್ರಮಿಸದೇ ಆತಂಕದಲ್ಲಿದ್ದಂತೆ ಕಂಡಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಹೌದು ಜಡೇಜಾ ತಮ್ಮ ಮೊದಲ ಎಸೆತದಲ್ಲೇ ವಿರಾಟ್ ಕೊಹ್ಲಿಯನ್ನು ಬೌಲ್ಡ್ ಮಾಡಿದ್ದರು. ಸಾಮಾನ್ಯವಾಗಿ ಒಂದು ವಿಕೆಟ್ ಪಡೆದ ಕೂಡಲೇ ಬೌಲರ್ ಸಂಭ್ರಮಿಸುವುದು ಸಾಮಾನ್ಯ. ಅಂತಹದರಲ್ಲಿ ವಿರಾಟ್ ಕೊಹ್ಲಿಯಂತ ಅತ್ಯುತ್ತಮ ಬ್ಯಾಟ್ಸ್ ಮನ್ ನನ್ನು ಔಟ್ ಮಾಡಿದಾಗ ಅದರ ಸಂಭ್ರಮಾಚರಣೆ ಅಧಿಕವಾಗಿರಬೇಕಿತ್ತು. ಆದರೆ ಇಲ್ಲಿ ಆಗಾಗಲಿಲ್ಲ. ಬದಲಿಗೆ ಬೌಲ್ಡ್ ಆಗುತ್ತಿದ್ದಂತೆ ಕೊಹ್ಲಿ ಜಡೇಜಾರನ್ನು ಗುರಾಯಿಸುವಂತೆ ನೋಡಿದ್ದಾರೆ.
ಸಾಮಾನ್ಯವಾಗಿ ಇಬ್ಬರು ಅಚಾನಕ್ಕಾಗಿ ಸಂಭವಿಸಿದ ಘಟನೆಯಿಂದ ಸ್ವಲ್ಪ ಗಲಿಬಿಲಿಯಾದಂತೆ ಕಂಡರು. ಹೀಗಾಗಿ ಒಬ್ಬರು ಇನ್ನೊಬ್ಬರ ಮುಖವನ್ನು ನೋಡಿದ್ದಾರೆ.
ಈ ಕುರಿತು ಟ್ವೀಟರಿಗರು ಹಾಸ್ಯಾತ್ಮಕ ಟ್ವೀಟ್ ಗಳನ್ನು ಮಾಡಿ ಇಬ್ಬರ ಕಾಳೆಯುತ್ತಿದ್ದಾರೆ.
Comments are closed.