ಕ್ರೀಡೆ

ಅಂತ್ಯಗೊಳ್ಳಲಿದೆ ಅಶ್ವಿ‌ನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಭವಿಷ್ಯ !

Pinterest LinkedIn Tumblr

ಮೊಹಾಲಿ: ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ನಾಯಕ ಆರ್‌. ಅಶ್ವಿ‌ನ್‌ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ ಭವಿಷ್ಯ ಭೀತಿಯಲ್ಲಿದೆಯೇ? ಹೌದು ಎಂದು ಕೆಲ ಆಂಗ್ಲ ಮೂಲಗಳು ವರದಿ ಮಾಡಿವೆ.

ಸದ್ಯ ಅಶ್ವಿ‌ನ್‌ ಟೆಸ್ಟ್‌ ತಂಡದಲ್ಲಿ ಮಾತ್ರ ಆಡುತ್ತಿದ್ದಾರೆ. ಸೀಮಿತ ಓವರ್‌ಗಳಲ್ಲಿ ಅವರಿಗೆ ಸ್ಥಾನವಿಲ್ಲ. ಸೀಮಿತ ಓವರ್‌ಗಳಲ್ಲಿ ಮಿಂಚುತ್ತಿರುವ ಕುಲದೀಪ್‌ ಯಾದವ್‌ ಮತ್ತು ಯಜುವೇಂದ್ರ ಚಾಹಲ್‌ ಅವರನ್ನು ಟೆಸ್ಟ್‌ನಲ್ಲೂ ಆಡಿಸುವ ಇಚ್ಛೆ ನಾಯಕ ವಿರಾಟ್‌ ಕೊಹ್ಲಿಗಿದೆ. ಆದ್ದರಿಂದ ಅಶ್ವಿ‌ನ್‌ ಅತ್ಯುತ್ತಮ ಪ್ರದರ್ಶನ ನೀಡುವುದು ಅನಿವಾರ್ಯ. ಮುಂದಿನ ಇಂಗ್ಲೆಂಡ್‌ ಪ್ರವಾಸದಲ್ಲಿ ಅಶ್ವಿ‌ನ್‌ ವಿಫ‌ಲರಾದರೆ ಅವರ ಪರಿಸ್ಥಿತಿ ಇಕ್ಕಟ್ಟಿಗೆ ಸಿಲುಕಲಿದೆ ಎಂದು ಮೂಲಗಳು ಹೇಳಿವೆ.

Comments are closed.