ಕ್ರೀಡೆ

ವಿಶ್ವದ ಅತ್ಯುತ್ತಮ ಅಭಿಮಾನಿಗಳು: ಬೆಂಗಳೂರಿನ ಬಗ್ಗೆ ವಿಲಿಯರ್ಸ್

Pinterest LinkedIn Tumblr


ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಚಾಂಪಿಯನ್‌ಶಿಪ್‌ನಲ್ಲಿ ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲುವಿನ ಹಾದಿಗೆ ಮರಳಿದೆ.

ಅಷ್ಟೇ ಯಾಕೆ ಶನಿವಾರದಂದು ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.

ಬೆಂಗಳೂರಿನ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು 360 ಡಿಗ್ರಿ ಶಾಟ್ ಖ್ಯಾತಿಯ ಸ್ಫೋಟಕ ಬ್ಯಾಟ್ಸ್‌ಮನ್ ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್.

24 ಎಸೆತಗಳಲ್ಲೇ ಅರ್ಧಶತಕವನ್ನು ಬಾರಿಸಿರುವ ಎಬಿಡಿ ಅಂತಿಮವಾಗಿ 39 ಎಸೆತಗಳಲ್ಲಿ 10 ಬೌಂಡರಿ ಹಾಗೂ ಐದು ಅಮೋಘ ಸಿಕ್ಸರ್‌ಗಳ ನೆರವಿನಿಂದ 90 ರನ್ ಗಳಿಸಿ ಅಜೇಯರಾಗುಳಿದಿದ್ದರು. ಇದರೊಂದಿಗೆ ಆರ್‌ಸಿಬಿ 6 ವಿಕೆಟುಗಳ ಅಂತರದ ಗೆಲುವು ದಾಖಲಿಸಿತ್ತು.

ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ವಿಲಿಯರ್ಸ್, “ಇದು ವಿಶ್ವದ ಅತ್ಯುತ್ತಮ ಅಭಿಮಾನಿಗಳ ಬಳಗವನ್ನು ಹೊಂದಿದೆ” ಎಂದು ಬೆಂಗಳೂರಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

“ಬೆಂಗಳೂರಿನ ಚಿನ್ನಸ್ವಾಮಿ ಕ್ರೀಂಡಾಗಣದಲ್ಲಿ ತನಗೆ ಅತಿ ಹೆಚ್ಚು ಪ್ರೀತಿ ದೊರಕಿದೆ. ನನಗಿಲ್ಲಿ ಆಡುವುದೆಂದರೆ ತುಂಬಾನೇ ಇಷ್ಟ” ಎಂದು ವಿವರಿಸಿದ್ದಾರೆ.

ಸೋಲೇ ಆಗಲಿ, ಗೆಲುವೇ ಆಗಲಿ ಬೆಂಗಳೂರಿನ ಅಭಿಮಾನಿಗಳು ಯಾವತ್ತೂ ಆರ್‌ಸಿಬಿ ತಂಡದ ಬೆಂಗಾವಲಿಗೆ ನಿಂತಿದ್ದಾರೆ. ಇದನ್ನೇ ಬೊಟ್ಟು ಮಾಡಿರುವ ವಿಲಿಯರ್ಸ್, ಆರ್‌ಸಿಬಿ ಅಭಿಮಾನಿಗಳ ಬಗ್ಗೆ ಗುಣಗಾನ ಮಾಡಿದ್ದಾರೆ. ಹಾಗೆಯೇ ದಕ್ಷಿಣ ಆಫ್ರಿಕಾದಂತೆ ಭಾರತದಲ್ಲೂ ಭಾರತದಲ್ಲೂ ಅತಿ ಹೆಚ್ಚು ಪ್ರೀತಿ ದೊರಕಿದೆ ಎಂದು ಹೇಳಿದರು.

Comments are closed.