ಕ್ರೀಡೆ

ಗೇಲ್, ವಾಟ್ಸನ್ ಕೈಬಿಟ್ಟು ಆರ್‌ಸಿಬಿ ತಪ್ಪು ಮಾಡಿತೇ…!

Pinterest LinkedIn Tumblr

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಮೆಂಟ್‌ನಲ್ಲಿ ಕ್ರಿಸ್ ಗೇಲ್ ಹಾಗೂ ಶೇನ್ ವಾಟ್ಸನ್ ತಮ್ಮ ತಮ್ಮ ಫ್ರಾಂಚೈಸಿಗಳ ಪರ ಅಮೋಘ ಶತಕಗಳನ್ನು ಬಾರಿಸಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುತ್ತಿರುವ ಗೇಲ್ ಐಪಿಎಲ್‌ನಲ್ಲಿ ದಾಖಲೆಯ ಆರನೇಯ ಶತಕ ಸಿಡಿಸಿದ್ದರು. ಅತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡಿರುವ ವಾಟ್ಸನ್, ಐಪಿಎಲ್‌ನಲ್ಲಿ ಮೂರನೇ ಶತಕ ಸಾಧನೆ ಮಾಡಿದ್ದಾರೆ.

ಅತ್ತ ಗೇಲ್ ಹಾಗೂ ವಾಟ್ಸನ್ ಅವರನ್ನು ಕೈಬಿಟ್ಟಿರುವುದು ಬೆಂಗಳೂರಿಗೆ ತುಂಬಲಾರದ ನಷ್ಟವಾಗಿ ಪರಿಣಮಿಸುತ್ತಿದೆ. ಈ ಪೈಕಿ ಗೇಲ್ ಆರು ಆವೃತ್ತಿಗಳಲ್ಲಿ ಬೆಂಗಳೂರು ಪರ ಆಡಿದ್ದರು.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಗದೋರ್ವ ಆರಂಭಿಕ ಬ್ಯಾಟ್ಸ್‌ಮನ ಕರ್ನಾಟಕ ಕೆಎಲ್ ರಾಹುಲ್ ಸಹ 14 ಎಸೆತಗಳಲ್ಲಿ ಐಪಿಎಲ್‌ನ ಅತಿ ವೇಗದ ಅರ್ಧಶತಕವನ್ನು ಸಿಡಿಸಿದ್ದರು.

ಆದರೆ ಆರ್‌ಸಿಬಿ ಪರ ಆಡುತ್ತಿರುವಾಗ ವಾಟ್ಸನ್ ಹಾಗೂ ರಾಹುಲ್ ಉತ್ತಮ ನಿರ್ವಹಣೆಯನ್ನು ನೀಡುತ್ತಿರಲಿಲ್ಲ. ಇದೀಗ ಪ್ರಸಕ್ತ ಸಾಲಿನಲ್ಲಿ ಅಮೋಘ ಬ್ಯಾಟಿಂಗ್ ಲಯ ಕಂಡುಕೊಂಡಿದ್ದಾರೆ.

ಐಪಿಎಲ್ 2018ನೇ ಆವೃತ್ತಿಗಾಗಿ ನಡೆದ ಹರಾಜಿನಲ್ಲಿ ಈ ಮೂವರನ್ನು ಉಳಿಸಿಕೊಳ್ಳಲು ಆರ್‌ಸಿಬಿ ಮನಸ್ಸು ಮಾಡಿರಲಿಲ್ಲ. ಅತ್ತ ವಿರಾಟ್ ಕೊಹ್ಲಿ ಪಡೆ ಕಳಪೆ ಪ್ರದರ್ಶನವನ್ನು ಮುಂದುವರಿಸಿದೆ. ಈ ಸಂಬಂಧ ಟ್ವಿಟರ್‌ನಲ್ಲಿ ಟೀಕೆಗಳು ಎದ್ದಿವೆ .

Comments are closed.