ಕ್ರೀಡೆ

ಮುಂಬೈ-ಬೆಂಗಳೂರಿನ ಮಧ್ಯೆ ನಡೆದ ಪಂದ್ಯದಲ್ಲಿ 3ನೇ ಅಂಪೈರ್ ಮಾಡಿದ ಎಡವಟ್ಟು ಏನು ಗೊತ್ತೇ..?

Pinterest LinkedIn Tumblr

ಮುಂಬೈ: ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ನಡುವಿನ ಪಂದ್ಯದಲ್ಲಿ ಮೂರನೇ ಅಂಪೈರ್ ನೀಡಿದ ಹಾರ್ದಿಕ್ ಪಾಂಡ್ಯ ಅವರ ನಾಟೌಟ್ ತೀರ್ಪು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಆರ್ಸಿಬಿ ತಂಡದ ವೇಗಿ ಉಮೇಶ್ ಯಾದವ್ ಅವರ ಔಟ್ ಕುರಿತಂತೆ ಮೂರನೇ ಅಂಪೈರ್ ಮತ್ತೊಂದು ಪ್ರಮಾದ ಎಸಗಿದ್ದಾರೆ.

ಗೆಲುವಿಗಾಗಿ ಆರ್ಸಿಬಿ ಹೋರಾಟ ನಡೆಸುತ್ತಿದ್ದಾಗ 18 ಓವರ್ ಅಂತ್ಯಕ್ಕೆ 8 ವಿಕೆಟ್ ಗೆ 137 ರನ್ ಗಳಿಸಿತ್ತು. ಈ ವೇಳೆ ಜಸ್ ಪ್ರೀತ್ ಬುಮ್ರಾ ಎಸೆದ ಓವರ್ ನಲ್ಲಿ ಉಮೇಶ್ ಯಾದವ್ ಕ್ಯಾಚ್ ನೀಡಿ ಔಟಾದರು. ಡಗೌಟ್ ಕಡೆಗೆ ಹೋಗುತ್ತಿದ್ದ ಉಮೇಶ್ ಯಾದವ್ ರನ್ನು ನೋಬಾಲ್ ಪರಿಶೀಲನೆಗಾಗಿ ಅಂಪೈರ್ ತಡೆದರು.

ಈ ವೇಳೆ ಪರಿಶೀಲನೆ ನಡೆಸಿದ ಮೂರನೇ ಅಂಪೈರ್ ಪರಿಶೀಲನೆ ಮಾಡಿದ ವಿಡಿಯೋದ ನಾನ್ ಸ್ಟ್ರೈಕರ್ ಎಂಡ್ ನಲ್ಲಿ ಉಮೇಶ್ ಯಾದವ್ ಕಂಡಿದ್ದರು. ಉಮೇಶ್ ಗೆ ಎಸೆದ ಎಸೆತದ ಬದಲು ತಂಡದ ನಾಯಕ ವಿರಾಟ್ ಕೊಹ್ಲಿ ಎದುರಿಸಿದ ಎಸೆತವನ್ನು ಮೂರನೇ ಅಂಪೈರ್ ಪರಿಶೀಲನೆ ಮಾಡಿದ್ದರು.

ಈ ವೇಳೆ ಅಂಪೈರ್ ಪ್ರಮಾದವನ್ನು ಯಾರು ಸೂಕ್ಷ್ಮವಾಗಿ ಪರಿಶೀಲಿಸಲಿಲ್ಲ. ಜತೆಗೆ ಆರ್ಸಿಬಿ ಸೋಲಿನ ಖಚಿತತೆ ಇದ್ದಿದ್ದರಿಂದ ದೊಡ್ಡ ವಿವಾದ ಕೂಡ ಆಗಲಿಲ್ಲ.

Comments are closed.