ಕ್ರೀಡೆ

ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಕೋಲ್ಕತಾಗೆ 71 ರನ್ ಗಳ ಭರ್ಜರಿ ಜಯ

Pinterest LinkedIn Tumblr

ಕೋಲ್ಕತಾ: ಈಡನ್ ಗಾರ್ಡನ್ ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ದೆಹಲಿ ವಿರುದ್ಧ ಕೋಲ್ತತಾ ತಂಡ 71 ರನ್ ಗಳ ಭರ್ಜರಿ ಜಯ ದಾಖಲಿಸಿದೆ.

ಕೋಲ್ಕತಾ ನೈಟ್ ರೈಡರ್ಸ್ ತಂಡ ನೀಡಿದ 201ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ದೆಹಲಿ ತಂಡ ಕೇವಲ 14.2 ಓವರ್ ನಲ್ಲಿ 129 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ದೆಹಲಿ ಪರ ರಿಷಬ್ ಪಂತ್ (43 ರನ್) ಮತ್ತು ಗ್ಲೇನ್ ಮ್ಯಾಕ್ಸ್ ವೆಲ್ (47 ರನ್) ಹೊರತು ಪಡಿಸಿದರೆ ಮತ್ತಾವ ಬ್ಯಾಟ್ಸಮನ್ ಕೂಡ ಎರಡಂಕಿ ಮೊತ್ತ ಕೂಡ ದಾಟಲಿಲ್ಲ. ದೆಹಲಿ ಮೇಲೆ ಆರಂಭದಿಂದಲೂ ಸವಾರಿ ಮಾಡಿದ ಕೋಲ್ತತಾ ಬೌಲರ್ ಗಳು ನಿಗದಿತವಾಗಿ ವಿಕೆಟ್ ಪಡೆಯು ಮೂಲಕ ಕೋಲ್ಕತಾ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.

ಪ್ರಮುಖವಾಗಿ ಸುನಿಲ್ ನರೇನ್ ಮತ್ತು ಕಲದೀಪ್ ಯಾದವ್ ತಲಾ 3 ವಿಕೆಟ್ ಪಡೆದು ದೆಹಲಿ ಸೋಲಿನ ರೂವಾರಿಗಳಾದರು. ಉಳಿದಂತೆ ಪಿಯೂಷ್ ಚಾವ್ಲಾ, ರಸೆಲ್, ಮಾವಿ ಮತ್ತು ಟಾಮ್ ಕುರ್ರಾನ್ ತಲಾ 1 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ತಂಡ ನಿತೀಶ್ ರಾಣಾ (59 ರನ್), ರಾಬಿನ್ ಉತ್ತಪ್ಪ (35 ರನ್), ಕ್ರಿಸ್ ಲಿನ್ನ್ (31 ರನ್) ಹಾಗೂ ಆ್ಯಂಡ್ರೆ ರಸೆಲ್ (41 ರನ್) ಅವರ ಬ್ಯಾಟಿಂಗ್ ನೆರವಿನಿಂದ 200 ರನ್ ಗಳ ಬೃಹತ್ ಮೊತ್ತ ಪೇರಿಸಿತು.

Comments are closed.