ಕ್ರೀಡೆ

ರಾಜಸ್ಥಾನ ವಿರುದ್ಧದ ಸೋಲಿನ ಬಗ್ಗೆ RCB ನಾಯಕ ವಿರಾಟ್ ಕೊಹ್ಲಿ ಹೇಳಿದ್ದೇನು…?

Pinterest LinkedIn Tumblr

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಬ್ಯಾಟ್ಸ್ ಮನ್ ಗಳ ಸ್ವರ್ಗವಾದ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬಗ್ಗೆ ಸರಿಯಾಗಿ ಅರ್ಧೈಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಭಾನುವಾರ ನಡೆದ ರಾಜಸ್ಥಾನ ವಿರುದ್ಧದ ಪಂದ್ಯ ಸೋತ ಬಳಿಕ ಅವರು ಹೇಳಿದ್ದಾರೆ.

ರಾಜಸ್ಥಾನ ನೀಡಿದ್ದ 218 ರನ್​ಗಳ ಗುರಿ ಬೆನ್ನತ್ತಿದ್ದ ವಿರಾಟ್ ಕೊಹ್ಲಿ ನೇತೃತ್ವದ ಬೆಂಗಳೂರು ತಂಡ 6 ವಿಕೆಟ್​ ನಷ್ಟಕ್ಕೆ 198 ರನ್​ ಗಳನ್ನಷ್ಟೇ ಗಳಿಸಲು ಶಕ್ಯವಾಗಿತ್ತು.

“ಬೆಂಗಳೂರಿನದು ನಿಧಾನ ಗತಿಯ ಪಿಚ್ ನ ಕ್ರೀಡಾಂಗಣವೆಂದು ನಾವು ಭಾವಿಸಿದ್ದು ತಪ್ಪಾಗಿತ್ತು. ಪಂದ್ಯದ ಮೊದಲ ಭಾಗದಲ್ಲಿ ರನ್ ಸುರಿಮಳೆಯಾದದ್ದನ್ನು ನೋಡಿ ನಮಗೆ ಅಚ್ಚರಿಯಾಗಿತ್ತು. ಎದುರಾಳಿಗಳಿಂದ ಇಷ್ಟು ಮೊತ್ತದ ರನ್ ಕಲೆಹಾಕಲಾಗುವುದೆಂದು ನಾವು ಭಾವಿಸಿರಲಿಲ್ಲ, ಇದು ಅವರ ಟಿ20 ” ಸೋಲಿನ ಬಳಿಕ ಕೊಹ್ಲಿ ಹೇಳಿದರು.

ಇಂಗ್ಲೆಂಡ್ ನ ಆಲ್ ರೌಂಡರ್ ಕ್ರಿಸ್ ವೊಕೆಕ್ಸ್ ಅವರ ಆಟವನ್ನು ಸಮರ್ಥಿಸಿಕೊಂಡ ಕೊಹ್ಲಿ “ಕ್ರಿಸ್ ವೊಕೆಕ್ಸ್ ಬೌಲಿಂಗ್ ಮಾಡಲು ಹೊರಟಾಗಲೆಲ್ಲಾ ನಮ್ಮ ವಿಕೆಟ್ ಕಿತ್ತಿದ್ದಾರೆ ಇದಕ್ಕೆಂದೇ ಅವರನ್ನು ಹರಾಜಿನ ವೇಳೆ ಭಾರೀ ಮೊತ್ತಕ್ಕೆ ಖರೀದಿಸಲಾಗಿದೆ”.

“ಇದು ಅವರ ದಿನವಾಗಿತ್ತು. ಎಲ್ಲಾ ಎರಡೂ ಇನ್ನಿಂಗ್ಸ್ ಸೇರಿ ಸುಮಾರು 400 ರನ್ ಗಳಿಸುವುದು ಅಷ್ಟೇನೋ ಸುಲಭವಲ್ಲ. ಬೌಲರ್ ಗಳ ಬಗ್ಗೆ ಬಹಳ ಕಠಿಣ ತೀರ್ಮಾನ ತೆಗೆದುಕೊಳ್ಳಲು ನಾನು ಬಯಸಲಾರೆ” ನಾಯಕ ಕೊಹ್ಲಿ ಹೇಳಿದ್ದಾರೆ.

“ಬೌಲರ್ ಗಳ ಮೇಲೆ ಒತ್ತಡ ಕಡಿಮೆ ಮಾಡಲು ಪವನ್ ನೇಗಿ ಅವರನ್ನು ಹೆಚ್ಚುವರಿ ಬೌಲರ್ ಆಗಿ ಇಳಿಸಲು ಯೋಜಿಸಿದ್ದೆ. ಆದರೆ ಎದುರಾಳಿ ತಂಡದವರು ನೇಗಿ ಅವರನ್ನೂ ಸೇರಿದಂತೆ ನಮ್ಮ ಎಲ್ಲಾ ಬೌಲರ್ ಗಳ ದಾಳಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು.” ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೊಹ್ಲಿ ಹೇಳಿದ್ದಾರೆ.

“ಕೆಲವೊಂದಷ್ಟು ವಿಚಾರಗಳನ್ನು ಮಾತ್ರ ನಾವು ಯೋಜಿಸಬಹುದು, ಆದರೆ ಎಲ್ಲವೂ ನಾವು ಯೋಜಿಸಿದಂತೆ ನಡೆಯುವುದಿಲ. ಹೀಗಾಗಿ ನಡೆದಿರುವುದನ್ನು ನಾವು ಒಪ್ಪಿಕೊಳ್ಳಬೇಕು. ಸಧ್ಯ ತಂಡದ ಸದಸ್ಯರು ನಾವೆಲ್ಲಿ ತಪ್ಪಿದ್ದೇವೆ ಎನ್ನುವುದನ್ನು ತಿಳಿದು ಸರಿಪಡಿಸಿಕೊಳ್ಳಬೇಕು.ಇಷ್ಟಾಗಿ 200 ರನ್ ಗಳ ಗುರಿ ಯಾವಾಗಲೂ ಕಠಿಣವಾಗಿರಲಿದೆ.

ಇದು ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಅತ್ಯುತ್ತಮ ಪ್ರಯತ್ನವಾಗಿತ್ತು ಏಕೆಂದರೆ ಉನ್ನತ-ಕ್ರಮಾಂಕದ ಬ್ಯಾಟ್ಸ್ ಮನ್ ಗಳು ವೈಫಲ್ಯ ಕಂಡಾಗ ಇವರ ಆಟ ತಂಡಕ್ಕೆ ವಿಶ್ವಾಸ ನೀಡುತ್ತದೆ.ಮನ್ ದೀಪ್ ಸಿಂಗ್ ಹಾಗು ವಾಷಿಂಗ್ ಟನ್ ಸುಂದರ್ ಅವರ ಜತೆಯಾಟದ ಕುರಿತಂತೆ ಕೊಹ್ಲಿ ಹೇಳಿದರು.

ತಂಡವು ಸರ್ಫ್ ರಾಜ್ ಖಾನ್ ಅವರ ಆಕ್ರಮಣಕಾರಿ ಆಟದಿಂದ ಅವಂಚಿತವಾಗಿದೆಯೆ ಎಂದು ಕೇಳಿದ್ದ ಪ್ರಶ್ನೆಗೆ “ನಾವು ನಿರ್ದಿಷ್ಟ ಪಂದ್ಯವೊಂದರಲ್ಲಿ ಆಟಗಾರರ ಪರ್ಫಾರ್ಮೆನ್ಸ್ ಪ್ರಕಾರ ಅವರ ಆಯ್ಕೆ ಮಾಡುವುದಿಲ್ಲ. ಪ್ರತಿ ಹಂತದಲ್ಲಿ ತಂಡದ ಸಮತೋಲನ ಕಾಪಾಡಿಕೊಳ್ಳುತ್ತೇವೆ” ಎಂದರು.

45-ಬಾಲ್ ಗೆ 92 ರನ್ ಗಳಿಸಿದ್ದ ಸಂಜು ಸಮ್ಸಾನ್ ಅವರನ್ನು ಪ್ರಶಂಸಿಸಿದ ಕೊಹ್ಲಿ ಇಂತಹಾ ಆಟಗಾರರಿಂದ ರಾಷ್ಟ್ರೀಯ ತಂಡವು ಭವಿಷ್ಯದಲ್ಲಿ ಮಹತ್ವದ ಆಟಗಾರರನ್ನು ಹೊಂದುವುದು ಸಾಧ್ಯವಿದೆ ಎಂದರು.

Comments are closed.