ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್ 2018: ಪಿವಿ ಸಿಂಧು ಮಣಿಸಿ ಚಿನ್ನ ಗೆದ್ದ ಸೈನಾ

Pinterest LinkedIn Tumblr

ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಫೈನಲ್ಸ್ ಹಣಾಹಣಿಯಲ್ಲಿ ಒಲಂಪಿಕ್ ಬೆಳ್ಳಿ ಪದಕ ವಿಜೇತೆಯಾದ ಪಿವಿ ಸಿಂಧು ಅವರನ್ನು ಮಣಿಸಿದ ಸೈನಾ ನೆಹ್ವಾಲ್ ಚಿನ್ನ ಗಳಿಸಿದ್ದಾರೆ.

ಕಠಿಣ ಹೋರಾಟದ ಪಂದ್ಯದಲ್ಲಿ ಸೈನಾ 21-18, 23-21ರಿಂದ ಗೆಲುವು ಸಾಧಿಸಿದ್ದಾರೆ. ಸಮ ಬಲದ ಹಣಾಹಣಿಯಿದ್ದ ಪಂದ್ಯದಲ್ಲಿ ಸೈನಾ ತಮ್ಮ ಬಿಗಿ ಪಟ್ಟಿನಿಂದ ಕೂಡಿದ ಆಕ್ರಮಣದ ಮೂಲಕ ಗೆಲುವನ್ನು ತಮ್ಮತ್ತ ಸೆಳೆದುಕೊಂಡಿದ್ದರು.

ಸಿಂಧು ಸಹ ಸಾಕಷ್ಟು ಹೋರಾಟ ನೀಡಿದ್ದರೂ ಸೈನಾ ಅವರ ತಂತ್ರದೆದುರು ತಾವು ವಿಫಲರಾಗಬೇಕಾಯಿತು. ಪಂದ್ಯದ ಮೊದಲ ಸುತ್ತು 23 ನಿಮಿಷಗಳಲ್ಲಿ ಕೊನೆಗೊಂಡಿದ್ದು ಸೈನಾ 21-18 ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು.

ಸಿಂಧು ಒಂದು ಹಂತದಲ್ಲಿ 19-16 ಮುನ್ನಡೆ ಸಾಧಿಸಿದ್ದರೂ ಸಹ ಪಂದ್ಯ ಮುಂದುವರಿದಂತೆ ಸೈನಾ ಸಹ ಉತ್ತಮ ಪ್ರದರ್ಶನದೊಡನೆ 19-19ರಲ್ಲಿ ಸಮಬಲ ಸಾಧಿಸಿದರು.

ಅಂತಿಮವಾಗಿ ಸೈನಾ ಕ್ರಾಸ್ ಕೋರ್ಟ್ ಸ್ಮಾಶ್ ಮೂಲಕ ಮುನ್ನಡೆ ಸಾಧಿಸಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದರು, ಸಿಂಧು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ಪ್ರಸಕ್ತ ಆವೃತ್ತಿಯ ಕಾಮನ್‌ವೆಲ್ತ್ ನಲ್ಲಿ ಬಾರತ 26 ಚಿನ್ನ, 17 ಬೆಳ್ಳಿ, 19 ಕಂಚಿನ ಪದಕಗಳೊಡನೆ 62 ಪದಕಗಳನ್ನು ತನ್ನದಾಗಿಸಿಕೊಂಡಿದೆ.

Comments are closed.