ಕ್ರೀಡೆ

ಕಾಮನ್ವೆಲ್ತ್ ಗೇಮ್ಸ್ 2018: ಮೊದಲ ಬಾರಿಗೆ ನೀರಜ್ ಚೋಪ್ರಾ ಜಾವಲಿನ್ ಥ್ರೋನಲ್ಲಿ ಚಿನ್ನ

Pinterest LinkedIn Tumblr

ಗೋಲ್ಡ್ ಕೋಸ್ಟ್: ಆಸ್ಪ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟ 2018ರಲ್ಲಿ ಮೊದಲ ಬಾರಿಗೆ ನೀರಜ್ ಚೋಪ್ರಾ ಜಾವಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

20 ವರ್ಷದ ನೀರಜ್ ಚೋಪ್ರಾ ಅವರು ಫೈನಲ್ ನಲ್ಲಿ 86.47 ಮೀಟರ್ ದೂರಕ್ಕೆ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತೀಯ ಚಿನ್ನದ ಪದಕ ಬೇಟೆ ಮುಂದುವರೆದಿದೆ. 21 ಚಿನ್ನ, 13 ಬೆಳ್ಳಿ, 14 ಕಂಚಿನ ಪದಕದ ಮೂಲಕ ಒಟ್ಟಾರೆ 48 ಪದಕಗಳನ್ನು ಗೆದ್ದಿದೆ.

Comments are closed.