ಕ್ರೀಡೆ

2018 ಕಾಮನ್’ವೆಲ್ತ್ ಕ್ರೀಡಾಕೂಟ: ಮುಂದುವರೆದ ಚಿನ್ನದ ಬೇಟೆ, 6 ಚಿನ್ನ, 2 ಬೆಳ್ಳಿ, 1 ಕಂಚು ಗೆದ್ದ ಭಾರತ

Pinterest LinkedIn Tumblr

ಗೋಲ್ಡ್’ಕೋಸ್ಟ್; 2018 ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಚಿನ್ನದ ಬೇಟೆಯನ್ನು ಮುಂದುವರೆದಿದ್ದು, ಭಾರತ ಭಾನುವಾರ ಸೂಪರ್ ಸಿಕ್ಸರ್ ಬಾರಿಸಿದೆ.

ಗಾಯದ ಸಮಸ್ಯೆ, ಫಿಸಿಯೋ ಕೊರತೆಗಳ ನಡುವೆಯೂ ಕಾಮನ್ ವೆಲ್ತ್ ಕ್ರೀಡಾಕೂಡದಲ್ಲಿ ವೇಟ್ ಲಿಫ್ಚರ್ ಗಳು ತಮ್ಮ ಪ್ರಾಬಲ್ಯತೆಯನ್ನು ಮುಂದುವರೆಸಿದ್ದು, ವೇಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ದಕ್ಕಿದೆ. ಭಾರತದ ಪೂನಮ್ ಯಾದವ್ ಒಟ್ಟು 222 ಕೆ.ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದಾರೆ.

69 ಕೆಜಿ ವಿಭಾಗದಲ್ಲಿ ಪೂನಮ್ಮ ಕ್ಲೀನ್ ಆ್ಯಂಡ್ ಜರ್ಕ್ ಮತ್ತು ಸ್ನ್ಯಾಚ್ ನಲ್ಲಿ ಉತ್ತಮ ಸಾಧನೆ ಮಾಡಿದರು.

ಇದರಂತೆ ಶೂಟಿಂಗ್ ವಿಭಾಗದಲ್ಲಿಯೂ ಭಾರತಕ್ಕೆ ಚಿನ್ನದ ದಕ್ಕಿದ್ದು, ಇದರೊಂದಿಗೆ ಭಾರತದ ಚಿನ್ನದ ಪದಕಗಳ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

16 ವರ್ಷದ ಭಾರತದ ಮನು ಬಾಕೇರ್ ಅವರು 10 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಇದೇ ವಿಭಾಗದಲ್ಲಿ ಹೀನಾ ಸಿಧು ಬೆಳ್ಳಿ ಪದಕದ ಸಾಧನೆ ಮಾಡಿದರು.

Comments are closed.