ಕ್ರೀಡೆ

ಕಣ್ಣೀರಿಡುತ್ತ ಚೆಂಡು ವಿರೂಪ ಪ್ರಕರಣದ ‘ಸಂಪೂರ್ಣ ಹೊಣೆ ಹೊತ್ತ’ ಸ್ಟೀವ್ ಸ್ಮಿತ್

Pinterest LinkedIn Tumblr

ಜಿ ನಾಯಕ ಸ್ಟೀವ್ ಸ್ಮಿತ್ ಅವರು, ಘಟನೆಗೆ ಸಂಬಂಧಿಸಿದಂತೆ ತಮ್ಮ ಪೋಷಕರ ಹಾಗೂ ಆಸೀಸ್ ಜನರ ಕ್ಷಮೆ ಕೇಳಿದ್ದಾರೆ.

ತವರಿನಲ್ಲಿ ಒಂದು ವರ್ಷ ನಿಷೇಧಕ್ಕೆ ಒಳಗಾದ ಬಳಿಕ ಇಂದು ಸಿಡ್ನಿಯಲ್ಲಿ ಭಾವನಾತ್ಮಕವಾಗಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸ್ಮಿತ್, ನನ್ನಿಂದಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತು ನನ್ನ ಪೋಷಕರಿಗೆ ತುಂಬಾ ನೋವಾಗಿದೆ. ಇದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ ಎಂದು ಕಣ್ಣೀರಿಟ್ಟರು.

ಮೊದಲು ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ. ಕ್ರಿಕೆಟ್ ಅನ್ನು ನಾನು ತುಂಬಾ ಪ್ರೀತಿಸುತ್ತೇನೆ ಮತ್ತು ಕ್ರಿಕೆಟ್ ಆಡುವ ಮಕ್ಕಳ್ಳನ್ನು ಪ್ರೀತಿಸುತ್ತೇನೆ. ಆದರೆ ನೀವು ನನ್ನನ್ನು ಪ್ರಶ್ನಿಸುವಂತಹ ಸಮಯ ಬಂದಿರುವುದು ದುರದೃಷ್ಟಕರ ಸ್ಮಿತ್ ಹೇಳಿದ್ದಾರೆ.

ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸದಂತೆ ಸ್ಮಿತ್ ಮತ್ತು ಕ್ಯಾಮೆರೋನ್ ಬ್ಯಾನ್ ಕ್ರಾಫ್ಟ್ ಪ್ರತ್ಯಕವಾಗಿ ಸುದ್ದಿ ಗೋಷ್ಠಿ ನಡೆಸಿದ್ದು, ಪ್ರಕರಣದಲ್ಲಿ ಭಾಗಿಯಾದ ಮತ್ತೊಬ್ಬ ಅಟಗಾರ ಡೇವಿಡ್ ವಾರ್ನರ್ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ತಮ್ಮ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ.

ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಗೆ ಒಂದು ವರ್ಷ ನಿಷೇಧ ಮತ್ತು ಬ್ಯಾನ್ ಕ್ರಾಫ್ಟ್ ಒಂಬತ್ತು ತಿಂಗಳು ನಿಷೇಧ ಹೇರಲಾಗಿದೆ. ಅಲ್ಲದೆ ಸ್ಮಿತ್ ಹಾಗೂ ವಾರ್ನರ್ ಇಬ್ಬರೂ ಆಟಗಾರರನ್ನು ಈ ವರ್ಷದ ಐಪಿಎಲ್ ನಿಂದ ಉಚ್ಚಾಟಿಸಲಾಗಿದೆ.

Comments are closed.