ಕ್ರೀಡೆ

ಟೀಮ್ ಇಂಡಿಯಾದ ಇಬ್ಬರು ಖ್ಯಾತ ಆಟಗಾರ ಮೇಲು ಚೆಂಡು ವಿರೂಪಗೊಳಿಸಿದ ಆರೋಪವಿತ್ತು! ಅವರು ಯಾರು ಗೊತ್ತೇ..?

Pinterest LinkedIn Tumblr

ನವದೆಹಲಿ: ಆಸ್ಟ್ರೇಲಿಯಾ ಆಟಗಾರರು ಚೆಂಡು ವಿರೂಪಗೊಳಿಸಿದ ಪ್ರಕರಣ ಭಾರಿ ಸುದ್ದಿಗೆ ಗ್ರಾಸವಾಗಿರುವಂತೆ ಇಂತಹುದೇ ಗಂಭೀರ ಆರೋಪ ಭಾರತದ ಸವ್ಯಸಾಚಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಮೇಲೂ ಇತ್ತಂತೆ..

ಚೆಂಡು ವಿರೂಪಗೊಳಿಸಿದ ಖ್ಯಾತನಾಮರ ಪಟ್ಟಿಯಲ್ಲಿ ವಾಸ್ತವವಾಗಿ ಸ್ವೀವ್ ಸ್ಮಿತ್ ಮಾತ್ರ ಇರುವುದಲ್ಲ. ಕ್ರಿಕೆಟ್‍ ಸ್ಟಾರ್ ಗಳಾದ ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಕೂಡಾ ಚೆಂಡು ವಿರೂಪಗೊಳಿಸಿರುವ ಆಟಗಾರರ ಪಟ್ಟಿಯಲ್ಲಿದ್ದಾರೆ.

ಅತಿಯಾಗಿ ಮನವಿ ಸಲ್ಲಿಸಿದ ಕಾರಣಕ್ಕೆ ಐದು ಮಂದಿ ಭಾರತೀಯ ಕ್ರಿಕೆಟರ್ ಗಳಿಗೆ ಶಿಕ್ಷೆ ವಿಧಿಸಿದಾಗ ಮತ್ತು ಪೋರ್ಟ್ ಎಲಿಜಬೆತ್‍ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಚೆಂಡು ವಿರೂಪಗೊಳಿಸಿದ ಆರೋಪಕ್ಕಾಗಿ ತೆಂಡೂಲ್ಕರ್ ಗೆ ನಿಷೇಧ ಹೇರಲಾಗಿತ್ತು. ಆಗ ಮ್ಯಾಚ್‍ ರೆಫ್ರಿ ಮೈಕ್ ಡೆನಿಸ್ ಅಂತಾರಾಷ್ಟ್ರೀಯ ಕ್ರಿಕೆಟ್‍ನ ಅತ್ಯುನ್ನತ ಸ್ಥಾನದಲ್ಲಿದ್ದರು. ಅಂದು ಮೈದಾನದಲ್ಲಿ ಸಚಿನ್ ಚೆಂಡಿನ ಸೀಮ್ ನಲ್ಲಿ ಅಂಟಿಕೊಂಡಿದ್ದ ಮಣ್ಣನ್ನು ತೆಗೆಯುತ್ತಿದ್ದರು. ಇದನ್ನು ಟಿವಿ ಕ್ಯಾಮೆರಾಗಳು ಸೆರೆ ಹಿಡಿದಿದ್ದವು. ಆದರೆ ಅಂಪೈರ್ ಗಳು ಇದನ್ನು ಗಮನಿಸದ ಕಾರಣ, ಇದು ಚೆಂಡಿನ ಸ್ಥಿತಿಯನ್ನು ತಿದ್ದಿದ ನಿಬಂಧನೆಗಳಡಿಯಲ್ಲಿ ಬಂದಿದೆ. ಈ ಪ್ರಕರಣ ಭಾರತಕ್ಕೆ ಗಂಭೀರ ತಿರುಗುಬಾಣವಾಗಿ ಪರಿಣಮಿಸಿತು ಮತ್ತು ಕ್ಷಿಪ್ರವಾಗಿ ವಿವಾದಕ್ಕೆ ಎಡೆ ಮಾಡಿಕೊಟ್ಟಿತು. ಸಚಿನ್ ಗೆ ಒಂದು ಪಂದ್ಯದ ಅಮಾನತು ಶಿಕ್ಷೆ ಕೂಡ ವಿಧಿಸಲಾಗಿತ್ತು. ಬಳಿಕ ಈ ಘಟನೆಯ ಬಗ್ಗೆ ವಿಸ್ತೃತವಾದ ತನಿಖೆ ನಡೆಸಿದ ಐಸಿಸಿ, ತೆಂಡೂಲ್ಕರ್ ಅವರಿಗೆ ವಿಧಿಸಿದ್ದ ಒಂದು ಪಂದ್ಯದ ಅಮಾನತು ಶಿಕ್ಷೆಯನ್ನು ರದ್ದು ಮಾಡಿತು.

ಸಚಿನ್ ರಂತೆಯೇ ದ್ರಾವಿಡ್ ಮೇಲೂ ಚೆಂಡು ವಿರೂಪಗೊಳಿಸಿದ ಆರೋಪ ಹೊರಿಸಲಾಗಿತ್ತು. ಆಸ್ಟ್ರೇಲಿಯಾದಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯ ಆಡುವ ವೇಳೆ ದ್ರಾವಿಡ್ ಚೆಂಡಿಗೆ ಎಂಜಲು ಉಜ್ಜುತ್ತಿರುವುದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿತ್ತು. ಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಕಂಡುಬಂದಂತೆ ಭಾರತೀಯ ತಂಡದ ನಾಯಕ ದ್ರಾವಿಡ್ ಅವರು ಉದ್ದೇಶಪೂರ್ವಕವಾಗಿ ಚೆಂಡಿಗೆ ಎಂಜಲು ಹಚ್ಚಿದ್ದಾರೆ ಎಂದು ಮ್ಯಾಚ್ ರೆಫ್ರಿ ಕ್ಲೈವ್ ಲಾಯ್ಡ್ ಹೇಳಿದ್ದರು. ಇದು ನೀತಿಸಂಹಿತೆಯ ಉಲ್ಲಂಘನೆ ಎಂದು ಅಭಿಪ್ರಾಯಪಟ್ಟಿದ್ದರು. ಈ ತಪ್ಪಿಗಾಗಿ ಅವರಿಗೆ ಪಂದ್ಯದ ಶುಲ್ಕದ ಶೇಕಡಾ 50ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗಿತ್ತು.

Comments are closed.