ಕ್ರೀಡೆ

ಸ್ಯಾಂಡಲ್‍ವುಡ್‍ನಲ್ಲಿ ನೂತನವಾಗಿ ಕೆಸಿಸಿ ಪಂದ್ಯಾವಳಿ ಆರಂಭ; ಟಿ10 ಕ್ರಿಕೆಟ್ ಟೂರ್ನಿಗೆ ಸಿದ್ಧವಾಯ್ತು ತಂಡ

Pinterest LinkedIn Tumblr

ಬೆಂಗಳೂರು: ಕೆಪಿಎಲ್, ಸಿಸಿಎಲ್ ಆಯ್ತು. ಸ್ಯಾಂಡಲ್‍ವುಡ್‍ನಲ್ಲಿ ಇದೀಗ ನೂತನವಾಗಿ ಕೆಸಿಸಿ ಪಂದ್ಯಾವಳಿ ಆರಂಭವಾಗಿದೆ. ಕಿಚ್ಚ ಸುದೀಪ್ ಸಾರಥ್ಯದ ‘ಕರ್ನಾಟಕ ಚಲನಚಿತ್ರ ಕಪ್’ ಕ್ರಿಕೆಟ್ ಟೂರ್ನಮೆಂಟ್ ಗೆ ಅದ್ಧೂರಿ ಚಾಲನೆ ಸಿಕ್ಕಿದೆ.

ಸದಾ ಒಂದಿಲ್ಲೊಂದು ಚುಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸ್ಯಾಂಡಲ್​ವುಡ್​ನ ಕಿಚ್ಚ ಸುದೀಪ್, ಈ ಬಾರಿ ತಮ್ಮದೇ ಪರಿಕಲ್ಪನೆಯಲ್ಲಿ ‘ಕನ್ನಡ ಚಲನಚಿತ್ರ ಕಪ್’ ಕ್ರಿಕೆಟ್ ಟೂರ್ನಿ ಆಯೋಜಿಸುತ್ತಿದ್ದಾರೆ. ಏಪ್ರಿಲ್ 7 ಮತ್ತು 8 ರಂದು 10 ಓವರ್​ಗಳ ಮಾದರಿಯಲ್ಲಿ ನಗರದ ಆದಿತ್ಯ ಗೋಬ್ಲಲ್ ಮೈದಾನದಲ್ಲಿ ಟೂರ್ನಿ ನಡೆಯಲಿದೆ.

ಹಲವು ವರ್ಷಗಳಿಂದ ಸೆಲೆಬ್ರಿಟ್ ಕ್ರಿಕೆಟ್ ಲೀಗ್​ನಲ್ಲಿ (ಸಿಸಿಎಲ್) ಬೆಂಗಳೂರು ಬುಲ್ಡೋಜರ್ಸ್ ತಂಡ ಮುನ್ನಡೆಸಿದ್ದ ಸುದೀಪ್, ವಿಭಿನ್ನ ಶೈಲಿಯಲ್ಲಿ ಕೆಸಿಸಿ ಟೂರ್ನಿ ಸಂಘಟಿಸಲು ಮುಂದಾಗಿದ್ದಾರೆ. ಕೇವಲ ಸ್ಟಾರ್​ಗಳಲ್ಲದೆ, ಸಿನಿಮಾ ನಿರ್ವಪಕರು, ವಿತರಕರು, ತಂತ್ರಜ್ಞರು ಹಾಗೂ ಮಾಧ್ಯಮದವರಿಗೆ ಅವಕಾಶ ನೀಡಲಾಗುತ್ತಿದೆ. ಟೂರ್ನಿಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸುವ ದೃಷ್ಟಿಯಿಂದ ರಾಜ್ಯ ರಣಜಿ ಹಾಗೂ ಕರ್ನಾಟಕ ಪ್ರೀಮಿಯರ್ ಲೀಗ್​ನಲ್ಲಿ ಆಡಿದ ಆಟಗಾರರಿಗೂ ಅವಕಾಶ ನೀಡಲಾಗಿದೆ. ವಿವಿಧ ಕ್ಷೇತ್ರಗಳ ಹಿರಿಯರನ್ನು 6 ತಂಡಗಳಿಗೆ ನಾಯಕರನ್ನಾಗಿ ನೇಮಿಸಲಾಗಿದೆ. ಆಟಗಾರರ ಆಯ್ಕೆ ವೇಳೆ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್, ರವಿಚಂದ್ರನ್, ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ, ನಟ ಪುನೀತ್ ರಾಜ್​ಕುಮಾರ್, ಕರ್ನಾಟಕ ತಂಡದ ಆರ್. ವಿನಯ್ಕುಮಾರ್, ಶಾಸಕ ಅಶೋಕ್ ಖೇಣಿ, ಸುದೀಪ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಉಪಸ್ಥಿತರಿದ್ದರು.

ರಾಷ್ಟ್ರಕೂಟ ಪ್ಯಾಂಥರ್ಸ್ ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಈ ತಂಡ ಮುನ್ನಡೆಸುತ್ತಿದ್ದು, ರಕ್ಷಿತ್ ಶೆಟ್ಟಿ, ರಾಜ್ಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಸಿಎಂ ಗೌತಮ್ ಹಾಗೂ ಯುವ ಆಟಗಾರ ಶುಭಾಂಗ್ ಹೆಗ್ಡೆ ಆಡಲಿದ್ದಾರೆ.

ಒಡೆಯರ್ ಚಾರ್ಜರ್ಸ್ ತಂಡಕ್ಕೆ ಪತ್ರಕರ್ತ ಸದಾಶಿವ ಶೆಣೈ ನಾಯಕ್ವ ವಹಿಸಿದ್ದು, ನಟ ದಿಗಂತ್, ಮನೋರಂಜನ್ ರವಿಚಂದ್ರನ್ ಸ್ಟಾರ್ ಆಟಗಾರನಾಗಿದ್ದಾರೆ. ಜತೆಗೆ ನಿಹಾಲ್ ಉಳ್ಳಾಲ್, ಪ್ರಶಾಂತ್ ರಾಜ್ಯದ ತಂಡದ ಆಡಿದ ಆಟಗಾರರು ಈ ತಂಡದಲ್ಲಿ ಇರುವರು.

ವಿಜಯನಗರ ಪ್ಯಾಟ್ರಿಯಾಟ್ಸ್: ನಿರ್ದೇಶಕ ಹಾಗೂ ಛಾಯಗ್ರಾಹಕರಾದ ಕೃಷ್ಣ ನಾಯಕರಾದರೆ, ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ತಂಡದ ಸ್ಟಾರ್ ಆಟಗಾರರಾಗಿದ್ದಾರೆ. ರಾಜ್ಯ ತಂಡದ ಶರತ್ ಬಿಆರ್, ಕಿಶೋರ್ ಕಾಮತ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಜಯವಾಣಿ ಸಹಾಯಕ ಸುದ್ದಿ ಸಂಪಾದಕ ಮಲ್ಲಿಕಾಚರಣ ವಾಡಿ ಕಣಕ್ಕಿಳಿಯಲಿದ್ದಾರೆ.

ಹೊಯ್ಸಳ ಈಗಲ್ಸ್ ವಿತರಕರಾದ ಜಾಕ್ ಮಂಜು ಈ ತಂಡ ಮುನ್ನಡೆಸುತ್ತಿದ್ದು, ಟೂರ್ನಿಯರ ರೂವಾರಿ ಸುದೀಪ್ ತಂಡದ ಸ್ಟಾರ್ ಆಟಗಾರ. ವೃತ್ತಿಪರ ಆಟಗಾರರಾದ ನವೀನ್ ಎಸ್ ಹಾಗೂ ರಜತ್ ಹೆಗ್ಡೆ ಈ ತಂಡದ ಪರ ಆಡುವರು.

ಕದಂಬ ಲಯನ್ಸ್ ನಿರ್ದೇಶಕ ನಂದಕಿಶೋರ್ ಮುನ್ನಡೆಸುತ್ತಿರುವ ಈ ತಂಡದಲ್ಲಿ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಆಡಲಿದ್ದು, ಕೆಪಿಎಲ್ ಖ್ಯಾತಿಯ ಕೆಸಿ ಕಾರ್ಯಪ್ಪ, ರೋಹಿತ್ ಗೌಡ ಪ್ರಮುಖ ಸ್ಟಾರ್ ಆಗಿರಲಿದ್ದಾರೆ.

ಗಂಗಾ ವಾರಿಯರ್ಸ್ ನಿರ್ವಪಕ ಕೆಪಿ ಶ್ರೀಕಾಂತ್ ನಾಯಕತ್ವ ವಹಿಸಿದ್ದು, ರಾಕಿಂಗ್ ಸ್ಟಾರ್ ಯಶ್ ಸ್ಟಾರ್ ಕೋಟಾದಲ್ಲಿ ಆಡಲಿದ್ದು, ಆಲ್ರೌಂಡರ್​ಗಳಾದ ಸ್ಟಾಲಿನ್ ಹೂವರ್ ಹಾಗೂ ರಿತೇಶ್ ಭಟ್ಕಳ್ ಆಡುವರು.

Comments are closed.