ಕ್ರೀಡೆ

ಗೋಡೆ ಖ್ಯಾತಿಯ ದ್ರಾವಿಡ್ ಪ್ರಧಾನಿಯಾಗಲಿ: ಅಭಿಮಾನಿಗಳ ಒತ್ತಾಯ

Pinterest LinkedIn Tumblr

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) 2018ರ ಅಂಡರ್ 19 ವಿಶ್ವಕಪ್ ವಿಜೇತ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ಟ್ರೋಫಿ ಗೆದ್ದ ಬಳಿಕ ಸಂಭಾವನೆಯಲ್ಲೂ ಸಮಾನತೆಯ ತತ್ವ ಪ್ರತಿಪಾದಿಸಿದ್ದರು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನನಗೊಬ್ಬನಿಗೆ 50 ಲಕ್ಷ ರುಪಾಯಿ, ತಂಡದ ಆಟಗಾರರಿಗೆ 30 ಲಕ್ಷ ರುಪಾಯಿ, ತಂಡದ ಸಹಾಯಕ ಸಿಬ್ಬಂದಿಗೆ 20 ಲಕ್ಷ ರುಪಾಯಿ ನೀಡಿರುವುದು ಸರಿಯಲ್ಲ. ಬಿಸಿಸಿಐ ತಾರತಮ್ಯ ಮಾಡಿದೆ ಎಂದಿದ್ದರು.

ಇದಕ್ಕೆ ಬಿಸಿಸಿಐ ದ್ರಾವಿಡ್ ಅವರ ಶೇ.50ರಷ್ಟು ಸಂಭಾವನೆ ಕಡಿತ ಮಾಡಿತ್ತು. ದ್ರಾವಿಡ್ 50 ಲಕ್ಷ ರುಪಾಯಿ ಬದಲಿಗೆ 25 ಲಕ್ಷ ರುಪಾಯಿ ಮಾತ್ರ ಪಡೆದುಕೊಂಡಿದ್ದರು. ಇವರ ಈ ನಿರ್ದಾರವನ್ನು ಟ್ವೀಟರ್ ನಲ್ಲಿ ಸಾವಿರಾರು ಮಂದಿ ಶ್ಲಾಖಿಸಿದ್ದಾರೆ. ಜತೆಗೆ ದ್ರಾವಿಡ್ ದೇಶದ ಪ್ರಧಾನಿಯಾಗಲಿ, ಎಲ್ಲರಿಗೂ ಮಾದರಿ ವ್ಯಕ್ತಿ ಎಂದು ಟ್ವೀಟರ್ ನಲ್ಲಿ ಅಭಿಮಾನಿಗಳು ಬರೆದು ಪ್ರಕಟಿಸಿದ್ದು ಅದು ವೈರಲ್ ಆಗಿದೆ.

ಟ್ವೀಟರಿಗರು #RahulDravidforPM ‘ರಾಹುಲ್ ದ್ರಾವಿಡ್ ಫಾರ್ ಪಿಎಂ’ ಎಂದು ಆ್ಯಷ್ ಟ್ಯಾಕ್ ನೀಡಿ ಟ್ವೀಟ್ ಮಾಡುತ್ತಿದ್ದಾರೆ.

Comments are closed.