ಕ್ರೀಡೆ

ಪ್ಯಾರಾ ಅಥ್ಲೀಟ್ ಸಕಿನಾ ಆತ್ಮಹತ್ಯೆ ಬೆದರಿಕೆ

Pinterest LinkedIn Tumblr


ಹೊಸದಿಲ್ಲಿ: ಆಸ್ಟ್ರೇಲಿಯದಲ್ಲಿ ನಡೆಯಲಿರುವ 2018 ಕಾಮನ್‌ವೆಲ್ತ್ ಗೇಮ್ಸ್‌ನಿಂದ ತಮ್ಮ ಹೆಸರನ್ನು ಕಡೆಗಣಿಸಿರುವುದನ್ನು ಪ್ರತಿಭಟಿಸಿ ಭಾರತದ ಪ್ಯಾರಾ ಅಥ್ಲೀಟ್ ಸಕಿನಾ ಖತುನ್ ಆತ್ಮಹತ್ಯೆ ಬೆದರಿಕೆಯೊಡ್ಡಿದ್ದಾರೆ.

ಗ್ಲಾಸ್ಗೊದಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಲೈಟ್ ವೇಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಏಕ ಮಾತ್ರ ಭಾರತೀಯ ಪ್ಯಾರಾ ಅಥ್ಲೀಟ್ ಎಂಬ ದಾಖಲೆಗೆ ಪಾತ್ರವಾಗಿರುವ 28ರ ಹರೆಯದ ಸಕಿನಾ ಅವರನ್ನು ಈ ಬಾರಿಯ ಕಾಮನ್‌ವೆಲ್ತ್ ತಂಡದಿಂದ ಕೈಬಿಡಲಾಗಿತ್ತು.

ಇದರಿಂದ ತೀವ್ರ ಮನನೊಂದಿರುವ ಸಕಿನಾ ಅನ್ಯ ದಾರಿಯಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ಏತಕ್ಕಾಗಿ ಸಕಿನಾ ಅವರನ್ನು ಕೈಬಿಡಲಾಗಿದೆ ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಪ್ಯಾರಾ ಒಲಿಂಪಿಕ್ ಸಮಿತಿ ವಿರುದ್ಧ ಟೀಕೆಗಳು ಎದುರಾಗಿವೆ. ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯಲಿದೆ .

ನನ್ನ ಹೆಸರು ಸೇರ್ಪಡೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದೇನೆ. ಕೊನೆಯ ತನಕ ಹೋರಾಟಲಿದ್ದೇನೆ. ನನ್ನ ಜೀವನವನ್ನೇ ಹಾಳು ಮಾಡಲಾಗಿದ್ದು, ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರಲಿದ್ದೇನೆ. ಇಲ್ಲದಿದ್ದರೆ ಐಒಎ ಕಚೇರಿ ಮುಂದೆಯೇ ಆತ್ಮಹತ್ಯೆ ಮಾಡಲಿದ್ದೇನೆ ಎಂದು ಬೆದರಿಕೆಯೊಡ್ಡಿದ್ದಾರೆ.

ಬಂಗಾಳದ ಬಡ ಕುಟುಂಬದ ಸಕಿನಾ ಕಳೆದ ಕೆಲವು ವರ್ಷಗಳಿಂದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಬೇಟಿ ಬಚಾವೋ, ಬೇಟಿ ಪಡವೋ ಅಂತಿದ್ದಾರೆ. ಹಾಗಿದ್ದರೆ ಈ ಮಗಳನ್ನು ರಸ್ತೆ ಮಧ್ಯೆ ಹಾಕಿ ಬಿಟ್ಟು ಹೋಗಿದ್ದಾರೆ. ಪ್ರಧಾನಿ ಈ ಬಗ್ಗೆ ಮಧ್ಯೆ ಪ್ರವೇಶಿಸುವಂತೆ ಆಗ್ರಹಿಸಿದ್ದಾರೆ.

Comments are closed.