
ಮುಂಬಯಿ: ಕ್ರಿಕೆಟ್ ಮೈದಾನದಲ್ಲಿ ಮಾಜಿ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿರುವುದನ್ನು ನಾವು ನೋಡಿರುತ್ತೇವೆ. ಕ್ರಿಕೆಟ್ ನಿವೃತ್ತಿ ಜೀವನದ ಬಳಿಕವೂ ಸಾಮಾಜಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಚಿನ್ ಸಂಪೂರ್ಣವಾಗಿ ಮಗ್ನವಾಗಿದ್ದಾರೆ.
ಈ ನಡುವೆ ಆಪ್ತ ಸ್ನೇಹಿತರು ಹಾಗೂ ಕುಟುಂಬಕ್ಕಾಗಿ ಅಡುಗೆ ಭಟ್ಟರಾಗುವ ಸಚಿನ್ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.
ಈ ಸಂಬಂಧ ಸಚಿನ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಹೊಸ ವರ್ಷದ ಸಂಜೆಯಲ್ಲಿ ಸ್ನೇಹಿತರಿಗಾಗಿ ಆಹಾರ ತಯಾರಿಸಲು ತುಂಬಾ ಖುಷಿಯಾಗುತ್ತಿದೆ. ಅವರೆಲ್ಲರೂ ನನ್ನ ಆಹಾರವನ್ನು ರುಚಿಸಿದ್ದು, ಈಗಲೂ ಕೈ ಬೆರಳನ್ನು ನಾಲಿಗೆಯಿಂದ ಸವರುತ್ತಿದ್ದಾರೆ ಎಂದು ಸಂತೋಷವನ್ನು ಹಂಚಿಕೊಂಡಿದ್ದಾರೆ.
ಹಾಗೆಯೇ ಪ್ರತಿಯೊಬ್ಬರಿಗೆ ಹೊಸ ವರ್ಷದ ಶುಭಾಶಯವನ್ನು ಲಿಟ್ಲ್ ಮಾಸ್ಟರ್ ಕೋರಿದ್ದಾರೆ.
ಇದಕ್ಕೂ ಮೊದಲು ಶನಿವಾರ ರಾತ್ರಿಯೇ ತಮ್ಮ ದೀರ್ಘ ಕಾಲದ ಸಹ ಆಟಗಾರರದ ಯುವರಾಜ್ ಸಿಂಗ್ ಮತ್ತು ಅಜಿತ್ ಅಗರ್ಕರ್ ಜತೆ ಸಚಿನ್ ತೆಂಡೂಲ್ಕರ್ ಹೊಸ ವರ್ಷವನ್ನು ಆಚರಿಸಿಕೊಂಡಿದ್ದರು.
Comments are closed.