
ಇಸ್ಲಾಮಾಬಾದ್: ಪಾಕಿಸ್ತಾನಿ ಕ್ರಿಕೆಟಿಗ ಶೊಯೇಬ್ ಮಲಿಕ್ ರನ್ನು ಮದುವೆಯಾಗಿರುವ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇದೀಗ ತಮಗೆ ಸಿಕ್ಕಿರುವ ಬಿಡುವಿನ ವೇಳೆಯನ್ನು ಪಾಕಿಸ್ತಾನದಲ್ಲಿ ಕಳೆಯುತ್ತಿದ್ದಾರೆ.
ಮಂಡಿ ನೋವಿನಿಂದಾಗಿ ಟೆನಿಸ್ ಕಣದಿಂದ ದೂರವಿರುವ ಸಾನಿಯಾ ಇದೀಗ ಪಾಕಿಸ್ತಾನದ ಪತಿ ಮನೆಗೆ ತೆರಳಿದ್ದಾರೆ. ಪಾಕ್ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ತಮ್ಮ ಮನೆಯಲ್ಲಿ ಪಾಕ್ ಕ್ರಿಕೆಟಿಗರಿಗೆ ನೀಡಿದ ಔತಣಕೂಟದಲ್ಲಿ ಶೊಯೇಬ್ ಮಲಿಕ್ ಜತೆ ಸಾನಿಯಾ ಕೂಡಾ ಹಾಜರಾಗಿದ್ದಾರೆ.
ಈ ಸಂದರ್ಭದಲ್ಲಿ ಪಾಕ್ ಕ್ರಿಕೆಟಿಗರು ಸಾನಿಯಾ ಮಿರ್ಜಾ ಫೋಟೋಗಳನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ. ಇದರ ಜತೆಗೆ ಸ್ವತಃ ಶೊಯೇಬ್ ಮಲಿಕ್ ಕೂಡಾ ತಮ್ಮ ತಾಯಿ ಜತೆ ಸಾನಿಯಾ ಇರುವ ಫೋಟೋವನ್ನು ಪ್ರಕಟಿಸಿ ಸಂತೋಷದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
Comments are closed.