ಕ್ರೀಡೆ

44 ವರ್ಷಗಳಲ್ಲಿ ಮೊದಲ ಬಾರಿಗೆ 4 ದಿನಗಳ ಟೆಸ್ಟ್!

Pinterest LinkedIn Tumblr


ಪೋರ್ಟ್ ಎಲಿಜಬೆತ್: 44 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ನಾಲ್ಕು ದಿನಗಳ ಪ್ರಕಾರದ ಆಟಕ್ಕೆ ಮರಳಿದೆ.

ಎರಡು ವರ್ಷಗಳ ಹಿಂದೆಯಷ್ಟೇ ಟೆಸ್ಟ್ ಕ್ರಿಕೆಟ್‌ನಲ್ಲಿ ಡೇ-ಟೈಮ್ ಪರೀಕ್ಷೆ ನಡೆದಿತ್ತು. ಇದೀಗ ಡೇ-ನೈಟ್‌ನೊಂದಿಗೆ ನಾಲ್ಕು ದಿಗಳ ಆಟದ ಪರೀಕ್ಷೆ ನಡೆಯುತ್ತಿದೆ.

ಪೋರ್ಟ್ ಎಲಿಜಬೆತ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ನಡುವೆ ಈ ಐತಿಹಾಸಿಕ ಪಂದ್ಯವು ನಡೆಯುತ್ತಿದೆ.

ನಾಲ್ಕು ದಿನಗಳ ಟೆಸ್ಟ್ ಪಂದ್ಯದ ವಿಶೇಷತೆಗಳು:
ಡೇ-ನೈಟ್ ಪ್ರಕಾರ,
ಪಂದ್ಯದ ಅವಧಿ ಆರು ಗಂಟೆಯಿಂದ ಆರು ವರೆ ಗಂಟೆಗಳಿಗೆ ವಿಸ್ತರಣೆ,
ದಿನವೊಂದರಲ್ಲಿ ನಿಗದಿತ 90 ಓವರ್‌ಗಳ ಬದಲು ಗರಿಷ್ಠ 98 ಓವರ್‌ಗಳಿಗೆ ಏರಿಕೆ,
ಫಾಲೋಆನ್ ಹೇರಿಕೆ 200 ರನ್‌ಗಳಿಂದ 150 ರನ್‌ಗಳಿಕೆ ಇಳಿಕೆ,

ಚೊಚ್ಚಲ ನಾಲ್ಕು ದಿನಗಳ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ದಕ್ಷಿಣ ಆಫ್ರಿಕಾ ನಾಯಕ ಎಬಿಡಿ ವಿಲಿಯರ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಪಂದ್ಯಕ್ಕೆ ಫಾವ್ ಡು ಪ್ಲೆಸ್ಸಿಸ್ ಹಾಗೂ ಡೇಲ್ ಸ್ಟೈನ್ ಸೇವೆಯಿಂದ ವಂಚಿತವಾಗಿದೆ.

Comments are closed.