ಕ್ರೀಡೆ

‘ಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್ ಮಾತಿಗೆ ಮನಸೋತ ಜಾನ್ ಸೀನಾ

Pinterest LinkedIn Tumblr

ನವದೆಹಲಿ: ಡಬ್ಲ್ಯೂಡಬ್ಲ್ಯೂಇ ಖ್ಯಾತ ರೆಸ್ಲರ್ ಜಾನ್ ಸೆನಾಗೆ ಇಡೀ ಜಗತ್ತಿನಲ್ಲಿ ದೊಡ್ಡ ಅಭಿಮಾನಿಗಳ ಬಳಗ ಇದೆ. ಅಂತಹ ಜಾನ್ ಸಿನಾ ಅವರು ಟೀಂ ಇಂಡಿಯಾದ ಮಾಜಿ ನಾಯಕ ‘ಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಮಾತನ್ನು ಹಂಚಿಕೊಳ್ಳುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮೆಚ್ಚೆಗೆಗೆ ಪಾತ್ರರಾಗಿದ್ದಾರೆ.

ಯು ಡೋಂಟ್ ಪ್ಲೇ ಫಾರ್ ರಿವೇಂಜ್. ಯು ಪ್ಲೇ ಫಾರ್ ರೆಸ್ಪೆಕ್ಟ್ ಅಂಡ್ ಪ್ರೈಡ್(ಸೇಡಿಗಾಗಿ ನೀವು ಆಡಬೇಕಿಲ್ಲ. ಗೌರವ ಹಾಗೂ ಹೆಮ್ಮೆಯ ಸಲುವಾಗಿ ಆಟವಾಡಿ) ಎಂದು ದ್ರಾವಿಡ್ ತಮ್ಮ ಇನ್ಸ್ ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದರು. ಈ ಮಾತಿಗೆ ತಲೆ ಬಾಗಿರುವ ಜಾನ್ ಸಿನಾ ಪೋಸ್ಟ್ ಮಾಡಿದ್ದಾರೆ.

ದೆಹಲಿಯಲ್ಲಿ ಭಾನುವಾರ ಡಬ್ಲ್ಯೂಡಬ್ಲ್ಯೂಇ ಲೈವ್ ಇವೆಂಟ್ ನಲ್ಲಿ ಟ್ರಿಪಲ್ ಎಚ್ ಜತೆ ಮುಖಾಮುಖಿ ನಡೆಸಿದ್ದ ಜಾನ್ ಸೆನಾ ಗೆಲುವು ಸಾಧಿಸಿದ್ದರು. ದ್ರಾವಿಡ್ ರ ಮಾತನ್ನು ಶೇರ್ ಮಾಡಿದ್ದಕ್ಕೆ ಜಾನ್ ಸೆನಾರ ಪೋಸ್ಟ್ ಗೆ 1.30 ಲಕ್ಷಕ್ಕೂ ಅಧಿಕ ಲೈಕ್ಸ್ ಹಾಗೂ ಸಾವಿರಾರು ಕಮೆಂಟ್ ಗಳು ಬಂದಿವೆ.

Comments are closed.