ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸದ್ಯ ಯುವ ಪೀಳಿಗೆಗೆ ನೆಚ್ಚಿನ ಆಟಗಾರ. ಎಷ್ಟೋ ಮಕ್ಕಳು ಕೊಹ್ಲಿಯನ್ನು ನೋಡಿಯೇ ಕ್ರಿಕೆಟ್ ಅನ್ನೋ ಮಾಯಾಲೋಕಕ್ಕೆ ಎಂಟ್ರಿ ಕೊಡುತ್ತಾರೆ. ಅಂತಹ ಯುವ ಪೀಳಿಗೆಗೆ ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಕೆಲ ಸಲಹೆಗಳನ್ನು ನೀಡಿದ್ದಾರೆ.
ಕ್ರಿಕೆಟ್ ಲೋಕದಲ್ಲಿ ಉತ್ತುಂಗದಲ್ಲಿರುವ ವಿರಾಟ್ ಕೊಹ್ಲಿಯ ವಿರುದ್ಧ ರಾಹುಲ್ ದ್ರಾವಿಡ್ ಮಾತನಾಡಿದ್ದಾರೆ. ಕೊಹ್ಲಿಯ ಆಕ್ರಮಣಕಾರಿ ವರ್ತನೆಯನ್ನು ಅನುಕರಿಸಬೇಡಿ ಎಂದು ರಾಹುಲ್ ದ್ರಾವಿಡ್ ಯುವ ಪೀಳಿಗೆಗೆ, ಯುವ ಕ್ರಿಕೆಟಿಗರಿಗೆ ಕಿವಿ ಮಾತು ಹೇಳಿದ್ದಾರೆ.
ಯುವ ಆಟಗಾರರು ಸದ್ಯ ವಿರಾಟ್ ಕೊಹ್ಲಿಯನ್ನು ಹುಚ್ಚರಂತೆ ಫಾಲೋ ಮಾಡುತ್ತಿದ್ದಾರೆ. ಅದು ತಪ್ಪು, ಕೊಹ್ಲಿಯನ್ನು ನೀವು ಅನುಸರಿಸಿದರೆ ನಿಮ್ಮತನವನ್ನು ಮತ್ತು ನಿಮ್ಮ ಸ್ಟೈಲ್ ಆಫ್ ಬ್ಯಾಟಿಂಗ್ ಅನ್ನು ಕಳೆದುಕೊಳ್ಳುತ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ಕೆಲವೊಮ್ಮೆ ಮೈದಾನದಲ್ಲಿ ಅತೀರೇಕವಾಗಿ ವರ್ತಿಸುತ್ತಾರೆ. ಇದು ನನಗೆ ಮುಜುಗರ ತರಿಸುತ್ತದೆ. ಪ್ರತೀ ಸರಣಿ ಆರಂಭಕ್ಕೂ ಮುನ್ನ ಅವರು ನೀಡುವ ಹೇಳಿಕೆಗಳು ಅತೀರೇಕವಾಗಿರುತ್ತೆ ಎಂದು ದ್ರಾವಿಡ್ ಹೇಳಿದ್ದು ಈ ಹೇಳಿಕೆ ಕ್ರಿಕೆಟ್ ಲೋಕವನ್ನು ದಂಗು ಬಡಿಸಿದೆ.