ಕ್ರೀಡೆ

2015ರಿಂದ ಟೀಂ ಇಂಡಿಯಾದಲ್ಲಿ ಈ ಒಂದು ಸಮಸ್ಯೆಗೆ ಇನ್ನು ಪರಿಹಾರವೇ ಸಿಕ್ಕಿಲ್ಲ!

Pinterest LinkedIn Tumblr


ಮುಂಬೈ: ಸದ್ಯ ಕ್ರಿಕೆಟ್ ಲೋಕದಲ್ಲಿ ಟೀಂ ಇಂಡಿಯಾ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. ಆದರೆ 2015ರ ಏಕದಿನ ವಿಶ್ವಕಪ್ ಸೆಮಿಫೈನಲ್ ಬಳಿಕ ಟೀಂ ಇಂಡಿಯಾದಲ್ಲಿ ಈ ಒಂದು ಸಮಸ್ಯೆಗೆ ಮಾತ್ರ ಇಲ್ಲಿಯವರೆಗೂ ಪರಿಹಾರವೇ ಸಿಕ್ಕಿಲ್ಲ.

ವಿಶ್ವಕಪ್ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಟೂರ್ನಿಯಿಂದ ಹೊರಬಂದಿದ್ದ ಟೀಂ ಇಂಡಿಯಾ ಆ ಬಳಿಕ ಸುಮಾರು 47 ಪಂದ್ಯಗಳನ್ನು ಆಡಿದ್ದು ಅದರಲ್ಲಿ 30 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 10 ದ್ವಿಪಕ್ಷೀಯ ಸರಣಿಗಳಲ್ಲಿ 7 ಸರಣಿಗಳಲ್ಲಿ ಜಯಗಳಿಸಿದೆ. ಆದರೆ ತಂಡದಲ್ಲಿ ನಾಲ್ಕನೇ ಕ್ರಮಾಂಕದ ಸಮಸ್ಯೆ ಮಾತ್ರ ಇನ್ನು ಬಗೆಹರಿದಿಲ್ಲ.

ದಿಗ್ಗಜ ಆಟಗಾರರ ನಿವೃತ್ತಿ ಬಳಿಕ ಟೀಂ ಇಂಡಿಯಾಕ್ಕೆ 4ನೇ ಕ್ರಮಾಂಕದಲ್ಲಿ ಆಡುವ ಸೂಕ್ತ ಆಟಗಾರ ಮಾತ್ರ ಸಿಕ್ಕಿಲ್ಲ. 2015ರ ವಿಶ್ವಕಪ್ ನಿಂದ ಈವರೆಗೂ ತಂಡ ಈ ಕ್ರಮಾಂಕದಲ್ಲಿ 11 ಆಟಗಾರರನ್ನು ಪ್ರಯತ್ನಿಸಿದೆ. ಯಾರೂ ಸಹ ಯಶಸ್ಸು ಕಂಡಿಲ್ಲ. ಈ ಅವಧಿಯಲ್ಲಿ 4ನೇ ಕ್ರಮಾಂಕಕ್ಕೆ ಅತಿಹೆಚ್ಚು ಆಟಗಾರರನ್ನು ಪ್ರಯೋಗ ಮಾಡಿದ ತಂಡಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ.

ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಗಳಾದ ಸುರೇಶ್ ರೈನಾ, ಯುವರಾಜ್ ಸಿಂಗ್, ಎಂಎಸ್ ಧೋನಿ, ಅಜಿಂಕ್ಯ ರಹಾನೆ, ಕೇದಾರ್ ಜಾದವ್, ಕೆಎಲ್ ರಾಹುಲ್, ಮನೋಜ್ ತಿವಾರಿ, ಹಾರ್ದಿಕ್ ಪಾಂಡ್ಯ, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್ ಹಾಗೂ ಸ್ವತಃ ಕೊಹ್ಲಿ 4ನೇ ಕ್ರಮಾಂಕದಲ್ಲಿ ಆಡಿದ್ದಾರೆ. ಆದರೆ ಯಾರಿಗೂ ನಿರೀಕ್ಷಿತ ಯಶಸ್ಸು ದೊರೆತ್ತಿಲ್ಲ.

ಇನ್ನು ನಾಲ್ಕನೇ ಕ್ರಮಾಂಕದ ಸಮಸ್ಯೆ ಕುರಿತು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಕಳವಳ ವ್ಯಕ್ತಪಡಿಸಿದ್ದಾರೆ. ವಿಶ್ವಕಪ್ ಗೆ ಸರಿಯಾದ ಸಂಯೋಜನೆ ರಚಿಸುವ ಕಾರಣದಿಂದಲೇ ನಾವು ಇಷ್ಟೊಂದು ಪ್ರಯೋಗಗಳನ್ನು ನಡೆಸುತ್ತಿರುವುದಾಗಿ ಹೇಳಿದ್ದಾರೆ.

Comments are closed.