ಕ್ರೀಡೆ

ಮುಂಬೈಯಲ್ಲಿ ಧೋನಿ & ಕೊಹ್ಲಿ ರೆಸ್ಟೋರೆಂಟ್ ಆರಂಭಿಸಿದ ಅಭಿಮಾನಿ

Pinterest LinkedIn Tumblr

ಮುಂಬೈ: ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಾಗಿದ್ದಾರೆ. ಇಬ್ಬರೂ ಆಟಗಾರರಿಗೆ ತಮ್ಮದೇ ಆದ ಅಭಿಮಾನಿಗಳಿದ್ದಾರೆ.

ಮುಂಬೈ ನಲ್ಲಿರುವ ಅಭಿಮಾನಿಯೊಬ್ಬರು ತಮ್ಮ ರೆಸ್ಟೋರೆಂಟ್ ಗೆ ಧೋನಿ ಹಾಗೂ ಕೊಹ್ಲಿ ಇಬ್ಬರ ಹೆಸರನ್ನೂ ನಾಮಕರಣ ಮಾಡಿದ್ದಾರೆ. ಮುಂಬೈನಲ್ಲಿರುವ ಕಂಡಿವಲಿ ರೆಸ್ಟೋರೆಂಟ್ ನಲ್ಲಿ ಧೋನಿ & ಕೊಹ್ಲಿ ರೆಸ್ಟೋರೆಂಟ್ ಇದ್ದು, ಇದನ್ನು ಖ್ಯಾತ ಕ್ರಿಕೆಟ್ ಸ್ಟ್ಯಾಟಿಸ್ಟೀಷಿಯನ್ ಮೋಹನ್ ದಾಸ್ ಮೆನನ್ ಸಾಮಾಜಿಕ ಜಾಲತಾಣದಲ್ಲಿ ಅಪ್ ಡೇಟ್ ಮಾಡಿದ್ದಾರೆ.

ಮೋಹನ್ ದಾಸ್ ಮೆನನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡಿದ ಬೆನ್ನಲ್ಲೇ ಧೋನಿ & ಕೊಹ್ಲಿ ರೆಸ್ಟೋರೆಂಟ್ ಇರುವ ಪ್ರದೇಶವನ್ನು ತಿಳಿಸುವಂತೆ ಟ್ವೀಟಿಗರು ಕೇಳಿದ್ದಾರೆ. ಧೋನಿ ಹಾಗೂ ಕೊಹ್ಲಿಗೆ ಮುಂಬೈನೊಂದಿಗೆ ಯಾವುದೇ ಸಂಬಂಧವಿಲ್ಲದೇ ಇದ್ದರೂ ಸಹ ಮುಂಬೈ ನಲ್ಲಿ ಅವರ ಹೆಸರಿನ ರೆಸ್ಟೋರೆಂಟ್ ಇರುವುದು ವಿಶೇಷವಾಗಿದೆ.

Comments are closed.