ಕ್ರೀಡೆ

ಕೊಹ್ಲಿ ಭರ್ಜರಿ ದ್ವಿಶತಕ: ಸತತ 4 ದ್ವಿಶತಕ

Pinterest LinkedIn Tumblr


ಹೈದರಾಬಾದ್(ಫೆ.10): ಹೈದರಾಬಾದ್​​​ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್​​​ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್​​ ಕೊಹ್ಲಿ ತಮ್ಮ ಟೆಸ್ಟ್​​ ಕ್ರಿಕೆಟ್​’ನಲ್ಲಿ 4ನೇ ದ್ವಿಶತಕ ಸಿಡಿಸಿದ್ದಾರೆ. ಈ ಮೂಲಕ ಸತತ 4 ಸರಣಿಯಲ್ಲಿ 4 ದ್ವಿಶತಕ ಸಿಡಿಸಿದ ಏಕೈಕ ಆಟಗಾರರಾಗಿದ್ದಾರೆ.
ಈ ಹಿಂದೆ ಆಸ್ಟ್ರೇಲಿಯಾದ ಡಾನ್​ ಬ್ರಾಡ್​’ಮನ್​​ 3 ದ್ವಿಶತಕವನ್ನ ಸತತವಾಗಿ 3 ಸೀರಿಸ್’​​ನಲ್ಲಿ ಬಾರಿಸಿದ್ದರು. ಸದ್ಯ ವಿರಾಟ್​​ ಕೊಹ್ಲಿ ಇಂದು ಸಿಡಿಸಿದ ಭರ್ಜರಿ ದ್ವಿಶತಕದೊಂದಿಗೆ ಬ್ರಾಡ್​ಮನ್​ ದಾಖಲೆಯನ್ನು ಪುಡಿಪುಡಿ ಮಾಡಿದ್ದಾರೆ. ನಿನ್ನೆಯ ಮೊದಲ ದಿನದಾಟದಲ್ಲಿ ಶತಕ ಸಿಡಿಸಿದ ವಿರಾಟ್ ಅಜೇಯರಾಗಿ ಉಳಿದಿದ್ದರು.
ಇಂದು ನಿನ್ನೆಯ ಭರ್ಜರಿ ಆಟವನ್ನ ಮುಂದುವರಿಸಿದ ಕೊಹ್ಲಿ ದ್ವಿಶತಕ ಸಿಡಿಸಿದರು. ಈ ಹಿಂದೆ ವಿರಾಟ್​​ ಕೊಹ್ಲಿ ವೆಸ್ಟ್​​ ಇಂಡೀಸ್​​, ನ್ಯೂಜಿಲೆಂಡ್​​ ಹಾಗೂ ಇಂಗ್ಲೆಂಡ್​​ ವಿರುದ್ಧ ದ್ವಿಶತಕ ಸಿಡಿಸಿದರು. ಇದರೊಂದಿಗೆ ಭಾರತದ ಬ್ಯಾಟಿಂಗ್​​ ಲೆಜೆಂಡ್​​​ ಗವಸ್ಕರ್​​ ರವರ 4 ದ್ವಿಶತಕದ ದಾಖಲೆಯನ್ನ ಸರಿಗಟ್ಟಿದ್ದಾರೆ.

Comments are closed.