ಕ್ರೀಡೆ

ಕೊಹ್ಲಿ ಮತ್ತು ಧೋನಿ ನಾಯಕತ್ವದಲ್ಲಿ ವ್ಯತ್ಯಾಸವೇನು ಇಲ್ಲ!

Pinterest LinkedIn Tumblr


ಪುಣೆ(ಜ.16): ವಿರಾಟ್ ಕೊಹ್ಲಿ ಅಧಿಕೃತವಾಗಿ ನಾಯಕನಾಗಿ ಮೈದಾನಕ್ಕಿಳಿದ ನಿನ್ನೆಯ ಏಕದಿನ ಪಂದ್ಯ ಅಕ್ಷರಶಃ ಅಗ್ನಿಪರೀಕ್ಷೆಯಾಗಿತ್ತು. ಬ್ಯಾಟಿಂಗ್ ಪಿಚ್ ಲಾಭ ಪಡೆದ ಇಂಗ್ಲೆಂಡ್ ತಂಡ 350 ರನ್ ಕಲೆಹಾಕಿತು. ಕಷ್ಟಸಾಧ್ಯವಾದ ಸ್ಕೋರನ್ನ ಬೆನ್ನಟ್ಟಿದ ಕೊಹ್ಲಿ ಗೆಲುವನ್ನ ತಂದುಕೊಟ್ಟರು.
ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬಿಗ್ ಸ್ಕೋರಿಗೆ ಭಾರತದ ಭರವಸೆಗಳ ಬೌಲರ್`ಗಳ ವೈಫಲ್ಯವೂ ಕಾರಣವಾಗಿತ್ತು. ಅಶ್ವಿನ್, ಬುಮ್ರಾ, ಉಮೇಶ್ ಯಾದವ್ ಆಂಗ್ಲರಿಗೆ ನಿರಾಯಾಸವಾಗಿ ರನ್ ಬಿಟ್ಟುಕೊಟ್ಟರು. ಆಲ್ರೌಂಡರ್`ಗಳಾದ ಹಾರ್ದಿಕ್ ಮತ್ತು ಜಡೇಜಾ ಮಾತ್ರ ಕೊಂಚ ಕಡಿವಾಣ ಹಾಕಿದರು. 46 ರನ್ ನೀಡಿ 2 ವಿಕೆಟ್ ಕಿತ್ತ ಹಾರ್ದಿಕ್ ಕೊಹ್ಲಿ ನಾಯಕತ್ವವನ್ನ ಹೊಗಳಿದ್ದಾರೆ, ಕೊಹ್ಲಿ ಮತ್ತು ಧೋನಿ ನಾಯಕತ್ವದಲ್ಲಿ ತುಂಬಾ ವ್ಯತ್ಯಾಸವೇನೂ ಇಲ್ಲ ಎಂದು ಹಾರ್ದಿಕ್ ಹೇಳಿದ್ದಾರೆ.
“ಕೊಹ್ಲಿ ಮತ್ತು ಧೋನಿ ನಾಯಕತ್ವದ ಶೈಲಿಯಲ್ಲಿ ವ್ಯತ್ಯಾಸವಿದೆ ಎಂದು ನನಗನ್ನಿಸುತ್ತಿಲ್ಲ. ಬಹುತೇಕ ಇಬ್ಬರ ಶೈಲಿ ಒಂದೇ ರೀತಿ ಇದೆ. ನಮ್ಮ ಬೌಲಿಂಗ್`ನಲ್ಲಿ ಬೌಂಡರಿ, ಸಿಕ್ಸರ್`ಗಳು ಸಿಡಿದಾಗ ನಮ್ಮ ಪರವಾಗಿ ನಿಲ್ಲುತ್ತಿದ್ದ ಕೊಹ್ಲಿ ಹೆಚ್ಚು ತಲೆಕೆಡಿಸಿಕೊಳ್ಳದೇ ಬೌಲ್ ಮಾಡುವಂತೆ ಸಲಹೆ ನೀಡುತ್ತಿದ್ದರು. ಒಬ್ಬ ಬೌಲರ್`ಗೆ ಈ ಮಾತುಗಳು ಹೆಚ್ಚು ಆತ್ಮಸ್ಥೈರ್ಯ ಕೊಡುತ್ತವೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

Comments are closed.