ಕ್ರೀಡೆ

ರಣಜಿ ಕ್ವಾರ್ಟರ್​​​​ ಫೈನಲ್`ನಲ್ಲಿ 117 ವರ್ಷಗಳ ದಾಖಲೆ ಮುರಿದ ಗುಜರಾತ್ ಆಟಗಾರ

Pinterest LinkedIn Tumblr

gujarath
ಜೈಪುರ(ಡಿ.27): ಜೈಪುರದಲ್ಲಿ ನಡೆಯುತ್ತಿರುವ ಒರಿಸ್ಸಾ ವಿರುದ್ಧದ ರಣಜಿ ಕ್ವಾರ್ಟರ್ ಫೈನಲ್`ನಲ್ಲಿ ಗುಜರಾತ್`ನ ಆರಂಭಿಕ ಬ್ಯಾಟ್ಸ್`ಮನ್ ಸಮಿತ್ ಗೊಹೆಲ್ ಔಟಾಗದೆ 359 ರನ್`ಗಳನ್ನ ಸಿಡಿಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್`ನಲ್ಲಿ ಆರಂಭಿಕರಾಗಿ ಅತ್ಯಧಿಕ ರನ್ ಸಿಡಿಸಿದ ಸಾಧನೆ ಮಾಡಿದ್ದಾರೆ.
117 ವರ್ಷಗಳ ಹಿಂದೆ ಅಂದರೆ 1899ರಲ್ಲಿ ಓವಲ್`ನಲ್ಲಿ ಸರ್ರೆ ಬಾಬಿ ಅಬೆಲ್ ಔಟಾಗದೆ ಗಳಿಸಿದ್ದ 357 ರನ್ ಇದುವರೆಗಿನ ದಾಖಲೆಯಾಗಿತ್ತು. ರಣಜಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಕೀರ್ತಿಗೆ ಪಾತ್ರರಾಗಿರುವ ಗೊಹೆಲ್, ಪ್ರಥಮ ದರ್ಜೆಯಲ್ಲಿ ಆರಂಭಿಕನಾಗಿ ತ್ರಿಶತಕ ಸಿಡಿಸಿದ ಆಟಗಾರನೊಬ್ಬ ತನ್ನ ತಂಡದ ಇನ್ನಿಂಗ್ಸ್ ಪೂರ್ಣಗೊಳಿಸಿದ 4ನೇ ಆಟಗಾರ ಎನ್ನಿಸಿಕೊಂಡಿದ್ದಾರೆ.
ಸಮಿತ್ ಗೊಹೆಲ್ 723 ಎಸೆತಗಳಲ್ಲಿ 45 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 359 ರನ್ ಗಳಿಸಿ ದಾಖಲೆ ಬರದಿದ್ದಾರೆ.

Comments are closed.